ಅಲೆಕ್ಕಾಡಿಯ ಬಾಬು ಎಂಬವರು ಅಸೌಖ್ಯಗೊಂಡು ಬೆಳ್ಳಾರೆ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದಾಗ ಶವವನ್ನು ಮನೆಗೆ ಸಾಗಿಸಲು ಹಣವಿಲ್ಲದ ಸಂದರ್ಭದಲ್ಲಿ ಬೆಳ್ಳಾರೆಯಲ್ಲಿ ಪ್ರಸಿದ್ಧ ವೈದ್ಯರಾಗಿದ್ದ ಡಾ. ನಾರಾಯಣ ಭಟ್ ಸ್ಮರಣಾರ್ಥ ಅಂಬುಲೆನ್ಸ್ ನಲ್ಲಿ ಉಚಿತವಾಗಿ ಮೃತದೇಹವನ್ನು ಮೃತರ ಮನೆಗೆ ಸಾಗಿಸಿ ಮಾನವೀಯತೆ ಮೆರೆದ ಘಟನೆ ನ. 26ರಂದು ವರದಿಯಾಗಿದೆ.
ಮುರುಳ್ಯ ಗ್ರಾಮದ ಅಲೆಕ್ಕಾಡಿಯ ಬಾಬು ಎಂಬವರು ಅಸೌಖ್ಯಗೊಂಡಾಗ ಕುಕ್ಕುಜಡ್ಕದ ಆನಂದ ಎಂಬವರು ಬಾಬುರವರನ್ನು 108 ಅಂಬುಲೆನ್ಸ್ ಮೂಲಕ ಬೆಳ್ಳಾರೆಯ ಸರಕಾರಿ ಆಸ್ಪತ್ರೆಗೆ ಕರೆ ತಂದರು. ಆಸ್ಪತ್ರೆ ತಲುಪುವಾಗಲೇ ಬಾಬುರವರು ಮೃತಪಟ್ಟಿದ್ದರು. ಇವರ ಮೃತದೇಹವನ್ನು ಸಾಗಿಸಲು ಕುಟುಂಬದವರಲ್ಲಿ ಹಣ ಇಲ್ಲದಿರುವುದನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ಪುರುಷೋತ್ತಮ ಕಲ್ಮಡ್ಕ ಎಂಬವರು ತಾನು ಸ್ವಲ್ಪ ಹಣ ನೀಡಿ ಬೇರೆಯವರ ಮೂಲಕ ಹಣ ಸಂಗ್ರಹಿಸುವುದಾಗಿ ಹೇಳಿ ಅಂಬುಲೆನ್ಸ್ ನ್ನು ನಿರ್ವಹಿಸುತ್ತಿರುವ ಮಿತ್ರ ಜೆರಾಕ್ಸ್ ನ ಮಾಲಕರಾದ ಕೇಶವಚಂದ್ರರಲ್ಲಿ ತಿಳಿಸಿದಾಗ ಅವರು ಉಚಿತವಾಗಿ ನೀಡುವುದಾಗಿ ಹೇಳಿ ಡ್ರೈವರ್ ಶಿವರಲ್ಲಿ ವಿಷಯ ತಿಳಿಸಿ ಮೃತದೇಹವನ್ನು ಉಚಿತವಾಗಿ ಸಾಗಿಸಿದ್ದಾರೆ. ಮೃತ ಬಾಬುರವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.
Home Uncategorized ಬಡ ಕುಟುಂಬದ ಶವವನ್ನು ಉಚಿತವಾಗಿ ಸಾಗಿಸಿ ಮಾನವೀಯತೆ ಮೆರೆದ ಬೆಳ್ಳಾರೆಯ ಡಾ. ನಾರಾಯಣ ಭಟ್ ಸ್ಮರಣಾರ್ಥ...