ಸೈಂಟ್ ಜೋಸೆಫರ ಆಂಗ್ಲ ಮಾಧ್ಯಮ ಶಾಲೆ ಸುಳ್ಯ ಇದರ ರಜತ ಮಹೋತ್ಸವದ ಅಂಗವಾಗಿ ನ. 30 ರಂದು ಆಹಾರಮೇಳವನ್ನು ಶಾಲಾ ಆವರಣದಲ್ಲಿ ಆಯೋಜಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕರಾದ ಫಾದರ್ ವಿಕ್ಟರ್ ಡಿಸೋಜ ರವರು ವಹಿಸಿದ್ದರು . ಶಾಲಾ ಮುಖ್ಯ ಶಿಕ್ಷಕಿ ಸಿ. ಮೇರಿ ಸ್ಟೆಲ್ಲ ಸ್ವಾಗತಿಸಿದರು. ಶಾಲಾ ಸಹಶಿಕ್ಷಕಿ ಶ್ರೀಮತಿ ಸವಿತಾ ಎಸ್ ತೀರ್ಪುಗಾರರ ಕಿರು ಪರಿಚಯವನ್ನು ನೀಡಿದರು.
ಪ್ರಾಥಮಿಕ ಶಾಲಾ ಪೋಷಕ ಸಮಿತಿಯ ಉಪಾಧ್ಯಕ್ಷರಾದ ಶಶಿಧರ್ ಎಂ. ಜೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು 108 ಬಗೆಯ ಖಾದ್ಯಗಳನ್ನು ತಯಾರಿಸಿ, ಪ್ರದರ್ಶಿಸಿ ಹೆತ್ತವರ ಸಹಕಾರದೊಂದಿಗೆ ಮಾರಾಟವನ್ನು ಮಾಡಿದರು. ತೀರ್ಪುಗಾರರಾಗಿ ನಾಗೇಶ್ ಶೆಟ್ಟಿ, ಶ್ರೀಮತಿ ಶೀಬಾ, ಕುಮಾರಿ ಕೀರ್ತನಾ ಸಹಕರಿಸಿದರು. ನಾಗೇಶ್ ಶೆಟ್ಟಿ ಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿ, ಐದು ವಿಭಾಗಗಳಲ್ಲಿ ಅತ್ಯುತ್ತಮ ಖಾದ್ಯವನ್ನು ತಯಾರಿಸಿದ ವಿದ್ಯಾರ್ಥಿಗಳ ಹೆಸರನ್ನು ಘೋಷಿಸಿದರು.ಶಾಲಾ ಸಂಚಾಲಕರು ಬಹುಮಾನವನ್ನು ವಿತರಿಸಿದರು . ಶಾಲಾ ಮುಖ್ಯ ಶಿಕ್ಷಕಿ ತೀರ್ಪುಗಾರರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಶಾಲಾ ಸಂಚಾಲಕರು ಅಧ್ಯಕ್ಷೀಯ ಭಾಷಣವನ್ನು ಮಾಡಿದರು. ಶ್ರೀಮತಿ ವಿದ್ಯಾಶ್ರೀ ವಂದನಾರ್ಪಣೆಗೈದರು. ಶ್ರೀಮತಿ ಯಶ್ವಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಉಷಾದೇವಿ ಸಹಕರಿಸಿದರು.