ಸಂಪಾಜೆ ಗ್ರಾಮದ ಚೆಡಾವಿನ ಶ್ರೀ ಲಕ್ಷ್ಮೀ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಂಚಮಿ ಪೂಜೆ ಹಾಗೂ ಷಷ್ಠಿ ಪೂಜಾ ಕಾರ್ಯಕ್ರಮವು ಡಿ. 6 ಮತ್ತು 7 ರಂದು ನಡೆಯಿತು. ಡಿ. ೬ರಂದು ಬೆಳಿಗ್ಗೆ ಗಣಪತಿ ಹವನ, ನಾಗತಂಬಿಲ, ಪ್ರಸಾದ ವಿತರಣೆ ನಡೆಯಿತು.
ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆದ ಬಳಿಕ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಡಿ. ೭ರಂದು ಬೆಳಿಗ್ಗೆ ಗಣಪತಿ ಹವನ, ಬಳಿಕ ಮಹಾಬಲೇಶ್ವರ ಬಿರ್ಮುಕಜೆ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆದ ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.