ಗುರುಂಪುವಿನಲ್ಲಿ ಪಲ್ಟಿಯಾದ ಕಾರಿನಲ್ಲಿದ್ದ ಐವರು ಅದೃಷ್ಟವಶಾತ್ ‌ಪಾರು-ಆಸ್ಪತ್ರೆಗೆ ದಾಖಲು

0

ಮುನೀರ್ ರವರ ಮನೆಯ ಗೋಡೆಗೆ ಹಾನಿ

ಹಾಸನದ ಜಾವಕ್ಕಲ್ ಧಾರ್ಮಿಕ ಕೇಂದ್ರಕ್ಕೆ
ತೆರಳಿ ಕಣ್ಣೂರಿಗೆ ಹಿಂತಿರುಗುತ್ತಿದ್ದ ವೇಳೆ ಗುರುಂಪು ಬಳಿ ಕಾರು ಪಲ್ಟಿಯಾದ ಘಟನೆಯಲ್ಲಿ ಚಾಲಕ ಸೇರಿದಂತೆ 5 ಮಂದಿ ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಪಾರಾಗಿದ್ದಾರೆ.

ಘಟನೆಯಲ್ಲಿ ಒಬ್ಬರಿಗೆ ತಲೆಗೆ ಗಾಯವಾಗಿದ್ದು ಉಳಿದವರಿಗೆ ಸಣ್ಣ ಪುಟ್ಟ ಗಾಯವಾಗಿರುವುದು ತಿಳಿದು ಬಂದಿದೆ.

ಕಾರಿನಲ್ಲಿದ್ದ ಐದು ಮಂದಿ ಕೇರಳದ ಕಣ್ಣೂರು ಮೂಲದವರಾಗಿದ್ದು ಹಮೀದ್, ಬಶೀರ್, ರಹೀಸ್, ಹುಸೇನ್ ಮತ್ತು ಶಿಹಾಬ್ ಎಂಬುದಾಗಿ ತಿಳಿದು ಬಂದಿದೆ.

ಗಾಯಳುವನ್ನು ಸ್ಥಳೀಯ ನಿವಾಸಿಗಳಾದ ಬಶೀರ್, ಆಟೋ ಚಾಲಕ ಆರಿಶ್ ರವರು ಆಸ್ಪತ್ರೆಗೆ ಕರೆ ತಂದು ದಾಖಲಿಸುವಲ್ಲಿ ಸಹಕರಿಸಿದರು.

ಕಾರು ಬಿದ್ದ ಪರಿಣಾಮವಾಗಿ ಮುನೀರ್ ಎಂಬವರ ಮನೆಯ ಗೋಡೆಗೆ ಹಾನಿಯಾಗಿದೆ.