ಸುಳ್ಯದ ಸ್ನೇಹ ಶಾಲೆಯಲ್ಲಿ ಉದ್ಯಮ ತರಬೇತಿ

0

ಆಧುನಿಕ ಜಗತ್ತಿನಲ್ಲಿ ಕೈಗಾರಿಕಾ ವಲಯದಲ್ಲಿ ಭಾರೀ ವೇಗದ ಬದಲಾವಣೆಗಳು ಸಂಭವಿಸುತ್ತಿವೆ. ಹಾಗಾಗಿ ನಮ್ಮ ಶಿಕ್ಷಣದ ಜೊತೆಗೆ ನಾವು ಈ ಬದಲಾವಣೆಗಳ ಬಗ್ಗೆ ತಿಳಿಯುತ್ತಾ ಇರಬೇಕು. ಆಗ ಯಾವ ಉದ್ಯಮ ಯಶಸ್ವಿಯಾಗಬಹುದು ಎಂಬ ಸ್ಪಷ್ಟ ಚಿತ್ರಣ ಪಡೆಯಲು ಸಾಧ್ಯ ಎಂಬುದಾಗಿ ಸ್ನೇಹ ಸಂಸ್ಥೆಯಲ್ಲಿ ಶಿಕ್ಷಣದ ಉನ್ನತೀಕರಣಕ್ಕಾಗಿ ಮೆಂಟರ್ ಆಗಿ ಬಂದಿರುವ ದೆಹಲಿಯ ಕಂಪ್ಯೂಟರ್ ತಜ್ಞ ಶಶಿಧರ್ ರವರು ಹೇಳಿದರು.

ಅವರು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ತರಬೇತಿಯನ್ನು ನೀಡಿದರು.
ಇಂತಹ ತರಬೇತಿಯು ವಿದ್ಯಾರ್ಥಿಗಳನ್ನು ಆಳುಗಳಾಗದೆ ಮಾಲೀಕರಾಗುವ ಆತ್ಮವಿಶ್ವಾಸದಿಂದ ಕಲಿಯಲು ಅನುಕೂಲವಾಗುತ್ತದೆ ಎಂಬುದಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಹೇಳಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮೆಯವರು ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.