ಆಲೆಟ್ಟಿ ಗ್ರಾಮದ ಕೋಲ್ಚಾರು ನಿವಾಸಿ ಕುತ್ತಿಮುಂಡ ಕುಟುಂಬದ ಹಿರಿಯರು ಹಾಗೂ ಆಲೆಟ್ಟಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಬಾಲಕೃಷ್ಣ ಗೌಡ ಕಾರ್ತಡ್ಕ ರವರು
ಜ.21 ರಂದು ನಿಧನರಾಗಿದ್ದು ಮೃತರ ಉತ್ತರ ಕ್ರಿಯಾಧಿ ಸದ್ಗತಿ ಕಾರ್ಯಕ್ರಮ ಹಾಗೂ ಸಾರ್ವಜನಿಕ ಶ್ರದ್ಧಾಂಜಲಿ ನುಡಿನಮನಕಾರ್ಯಕ್ರಮವು ಮೃತರ ಸ್ವಗೃಹದಲ್ಲಿ ಜ.31 ರಂದು ನಡೆಯಿತು.

ಮೃತರ ಜೀವನಗಾಥೆಯ ಕುರಿತು ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ ಗೌಡ ಕೋಲ್ಚಾರು ರವರು ಸವಿಸ್ತಾರವಾಗಿ ತಿಳಿಸಿ ನುಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೃತರ ಪತ್ನಿ ಶ್ರೀಮತಿ ಶಾರದಾ,ಪುತ್ರರಾದ ಚಿಕ್ಕ ಬಳ್ಳಾಪುರದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿರುವ ಶಿವಪ್ರಸಾದ್ ಕೆ.ಬಿ, ಕೃಷಿಕರಾದ ಮನೋಹರ ಪ್ರಸಾದ್ ಕೆ.ಬಿ, ಪುತ್ರಿಯರಾದ ಶ್ರೀಮತಿ ಸತ್ಯವತಿ, ಶ್ರೀಮತಿ ಭಾಗೀರಥಿ, ಶ್ರೀಮತಿ ವಾಣಿ, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುತ್ತಿಮುಂಡ ಕುಟುಂಬದ ಹಿರಿಯ,ಕಿರಿಯ ಸದಸ್ಯರು ಮತ್ತು
ಬಂಧು ಮಿತ್ರರು ಉಪಸ್ಥಿತರಿದ್ದರು.















ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಬಂಧು ಮಿತ್ರರು ಒಂದು ನಿಮಿಷದ ಮೌನಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಶ್ರದ್ಧಾಂಜಲಿ ಕೋರಿದರು.









