ಅಧ್ಯಕ್ಷೆ: ಶ್ರೀಮತಿ ತಾರ ಗಂಗಾಧರ್, ಕಾರ್ಯದರ್ಶಿ: ಚಿತ್ರಾವತಿ, ಕೋಶಾಧಿಕಾರಿ ಹವ್ಯ ಬೈತಡ್ಕ
ಉಬರಡ್ಕ ಮಿತ್ತೂರು ಗ್ರಾಮದ ಉಬರಡ್ಕ ಯುವತಿ ಮಂಡಲದ ವಾರ್ಷಿಕ ಮಹಾಸಭೆಯು ಜ.19 ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಂಗಣದಲ್ಲಿ ನಡೆಯಿತು.















ಯುವತಿ ಮಂಡಲದ ಅಧ್ಯಕ್ಷೆ ಶ್ರೀಮತಿ ಚಂಪಾಕಿರಣ್ ಸಭೆಯ ಅಧ್ಯಕ್ಷತೆ ವಹಿಸಿ ಲೆಕ್ಕ ಪತ್ರ ವಾಚಿಸಿದರು.
ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಳಿ ಯ ಅಧ್ಯಕ್ಷರಾದ ವಿಜಯಕುಮಾರ್ ಉಬರಡ್ಕ ಮತ್ತು ಯುವಕ ಮಂಡಲದ ಗೌರವ ಸಲಹೆಗಾರ ಗಂಗಾಧರ ಭರ್ಜರಿಗುಂಡಿ ಹಾಗೂ ವೇದಿಕೆಯಲ್ಲಿ ಕೋಶಾಧಿಕಾರಿ ವನಿತಾ ಮೀನಗದ್ದೆ, ಉಪಾಧ್ಯಕ್ಷೆ ಹವ್ಯ ಬೈತಡ್ಕ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪ್ರಿಯಾ ಮಂಚದಕಲ್ಲು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಯುವತಿ ಮಂಡಲದ ನೂತನ ಅಧ್ಯಕ್ಷರಾಗಿ ಶ್ರೀಮತಿ ತಾರಾ ಗಂಗಾಧರ್ ಭರ್ಜರಿಗುಂಡಿ, ಕಾರ್ಯದರ್ಶಿ ಶ್ರೀಮತಿ ಚಿತ್ರಾವತಿ ಉಬರಡ್ಕ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಸುಮಿತ್ರ ಬಿ., ಕೋಶಾಧಿಕಾರಿಯಾಗಿ ಶ್ರೀಮತಿ ಹವ್ಯ ಬೈತಡ್ಕ, ಗೌರವಾಧ್ಯಕ್ಷರಾಗಿ ಶ್ರೀಮತಿ ಚಂಪಾ ಕಿರಣ್ ಹಾಗೂ ಉಪಾಧ್ಯಕ್ಷರಾಗಿ ಗೀತಾ ಉಬರಡ್ಕ, ಕ್ರೀಡಾ ಕಾರ್ಯದರ್ಶಿ ಭವಾನಿ ಮೂರ್ಜೆ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರಿಯಾ ಮಂಚದಕಲ್ಲು, ಕಾರ್ಯಕಾರಿ ಸದಸ್ಯರಾಗಿ ಶ್ರೀಮತಿ ಲಲಿತ, ಶ್ರೀಮತಿ ಶಾರದಾ, ಶ್ರೀಮತಿ ಪ್ರಶಾಂತಿ, ಶ್ರೀಮತಿ ಅರ್ಪಿತಾ, ಶ್ರೀಮತಿ ಪ್ರೇಮಲತಾ, ಶ್ರೀಮತಿ ಅಮಿತಾ ರೈ, ಶ್ರೀಮತಿ ವನಿತಾ ಬಿ.ಕೆ, ಕು.ಕವಿತ, ಕು.ಮಾನಸ, ಶ್ರೀಮತಿ ಭಾರತಿ, ಶ್ರೀಮತಿ ಶ್ರುತಿ, ಶ್ರೀಮತಿ ಪಾವನ, ಶ್ರೀಮತಿ ಸುಶೀಲ, ಶ್ರೀಮತಿ ಸುಶೀಲ, ಶ್ರೀಮತಿ ಲೀಲಾವತಿ, ಶ್ರೀಮತಿ ಆಶಿಕಾ, ಶ್ರೀಮತಿ ಮಾಲತಿ, ಶ್ರೀಮತಿ ಶಾರದಾ ಇವರುಗಳು ಆಯ್ಕೆಯಾದರು.









