ಮೊಗ್ರ, ಬಳ್ಳಕ್ಕ ರಸ್ತೆಗೆ ಡ್ಯಾಮೇಜ್: ಸ್ಥಳೀಯರಿಂದ ಆಕ್ಷೇಪ















ಸುಳ್ಯ ತಾಲೂಕಿನಾದ್ಯಂತ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಾಗುತಿದ್ದು ಗುತ್ತಿಗಾರು, ಮೊಗ್ರ, ಬಳ್ಳಕ್ಕ ರಸ್ತೆಯಲ್ಲೂ ಪೈಪ್ ಅಳವಡಿಕೆಯಾಗುತಿದ್ದು ಟೆಂಡರ್ ದಾರರು ನಿರ್ಲಕ್ಷ್ಯದಿಂದ ರಸ್ತೆಗೆ ಡ್ಯಾಮೇಜ್ ಉಂಟಾಗಿರುವುದಾಗಿ ಸ್ಥಳೀಯರು ಆಕ್ಷೇಪಿಸಿದ್ದಾರೆ.

ಜೆಸಿಬಿ ಕೆಲಸದವರು ರಸ್ತೆ ಬದಿ ಪೈಪ್ ಅಳವಡಿಸಲು ಕಣಿ ತೆಗೆಯುತ್ತಿರುವಾಗ ಜೆಸಿಬಿಯಿಂದ ಡಾಮರು ರಸ್ತೆಗೆ ಹಾನಿ ಆಗಿದ್ದು ಅದನ್ನು ಸ್ಥಳೀಯರು ಆಕ್ಷೇಪಿಸಿದ್ದಾರೆ. ಜ.31 ರಂದು ಇಲಾಖಾ ಅಧಿಕಾರಿಗಳು ಭೇಟಿ ನೀಡಿರುವುದಾಗಿ ಬಂದಿದೆ.









