ಅಬುದಾಯಿಯ ಎಮಿರೇಟ್ಸ್ ಸೊಸೈಟಿ ಆಫ್ ರೇಡಿಯೇಶನ್ ಒನ್ಕೊಲಜಿ ಇದರ ಬೋರ್ಡ್ ಸದಸ್ಯೆ & ಸೈಂಟಿಫಿಕ್ ಸಮಿತಿಯ ಅಧ್ಯಕ್ಷೆಯಾಗಿ ಡಾ.ಯಶಸ್ವಿನಿ ತ್ರಿಲೋಕ್ ಕಿರಿಭಾಗ ಆಯ್ಕೆ

0

ಅಬುದಾಯಿಯ 2024-2027 ನೇ ಸಾಲಿನ ಎಮಿರೇಟ್ಸ್ ಸೊಸೈಟಿ ಆಫ್ ರೇಡಿಯೇಶನ್ ಒನ್ಕೊಲಜಿ ಇದರ ಬೋರ್ಡ್ ಸದಸ್ಯೆ & ಸೈಂಟಿಫಿಕ್ ಸಮಿತಿಯ ಅಧ್ಯಕ್ಷೆಯಾಗಿ ಡಾ.ಯಶಸ್ವಿನಿ ತ್ರಿಲೋಕ್ ಕಿರಿ ಭಾಗ ಆಯ್ಕೆಯಾಗಿದ್ದಾರೆ.

ವೈದ್ಯಕೀಯ ಸೇವೆಯಲ್ಲಿ 15 ವರ್ಷಗಳ ಅನುಭವ ಹೊಂದಿರುವ ಇವರು ಇದೀಗ ಯುಎಇಯ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಮೆಡಿಕ್ಲಿನಿಕ್ ಇಲ್ಲಿ ರೇಡಿಯೇಶನ್ ಒನ್ಕೊಲಜಿ ಕನ್ಸಲ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರು ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಗ್ರಾಮದ ಡಾ.ಚಂದ್ರಶೇಖರ ಕಿರಿಭಾಗರವರ ಪುತ್ರ ತ್ರಿಲೋಕ್‌ರವರ ಪತ್ನಿ.

ಡಾ.ಯಶಸ್ವಿನಿಯವರ ಪತಿ
ಡಾ.ತ್ರಿಲೋಕ್‌ರವರು ಕೂಡ ಯುಎಇ ಯ ಮೆಡಿಕ್ಲಿನಿಕ್ ಆಸ್ಪತ್ರೆಯಲ್ಲಿ
ಹೃದಯ ಶಸ್ತ್ರ ಚಿಕಿತ್ಸ ಅರವಳಿಕೆ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.