ಕಾಯರ್ತೋಡಿ: ಶ್ರೀ ನಾಗದೇವರ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ

0

ಸುಳ್ಯ ನಗರದ ಕಾಯರ್ತೋಡಿಯ ಚಿತ್ರಕೂಟದಲ್ಲಿ ನಾರಾಯಣ ಆಚಾರ್ಯ ಮತ್ತು ಮನೆಯವರು ನಿರ್ಮಿಸಿದ ಶ್ರೀ ನಾಗದೇವರ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕವು ಅಶೋಕ್ ಸರಳಾಯ ಅಡೂರು ಅವರ ನೇತೃತ್ವದಲ್ಲಿ ಫೆ.1 ‌ಮತ್ತು 2ರಂದು ನಡೆಯಿತು.

ಫೆ.1ರಂದು ಸಂಜೆ ಪುರಹಾದಿ ವಾಸ್ತು ರಕ್ಷೋಘ್ನ, ಪ್ರಾಸಾದಶುದ್ಧಿ, ಅನ್ನಸಂತರ್ಪಣೆ ಜರುಗಿತು. ಫೆ.2ರಂದು ಬೆಳಿಗ್ಗೆ ಗಣಪತಿ ಹೋಮ, ಪ್ರತಿಷ್ಠೆ , ಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ತಿಕಾದಿ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.