ಸಾಧಕರಿಗೆ ಗೌರವಾರ್ಪಣೆ, ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಬೆಳ್ಳಾರೆ ವಲಯ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಐವರ್ನಾಡು ಇದರ ಸಹಯೋಗದೊಂದಿಗೆ 17ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಫೆ.02 ರಂದು ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಶ್ರೀ ಸತ್ಯನಾರಾಯಣ ಪೂಜೆಗೆ 105 ವೃತದಾರಿಗಳು ಭಾಗವಹಿಸಿದ್ದು 620 ಸತ್ಯನಾರಾಯಣ ಪೂಜಾ ಸೇವೆ ಆಗಿರುತ್ತದೆ.
















ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಕ್ಷೇತ್ರದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಶಾಸಕರಾದ ಕು. ಭಾಗೀರಥಿ ಮುರುಳ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್ ಎನ್ .ಮನ್ಮಥರವರು ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಪ್ರವೀಣ್ ಕುಮಾರ್ ಜಿಲ್ಲಾ ನಿರ್ದೇಶಕರು ಶ್ರೀ. ಕ್ಷೆ.ಧ.ಗ್ರಾ. ಯೋಜನೆ ದ.ಕ. ಜಿಲ್ಲೆ, ಶ್ರೀಮತಿ ಲೀಲಾವತಿ ಕುತ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಐವರ್ನಾಡು,ರಾಜೇಶ್ ಭಟ್ ಬಾಂಜಿಕೋಡಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು, ಶ್ರೀನಿವಾಸ ಮಡ್ತಿಲ ಮಾಜಿ ಅಧ್ಯಕ್ಷರು ವ್ಯವಸ್ಥಾಪನ ಸಮಿತಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಐವರ್ನಾಡು, ಶ್ರೀಮತಿ ವೇದಾ ಹೆಚ್ ಶೆಟ್ಟಿ,ಹಿರಿಯರಾದ ಕೊರಗಪ್ಪ ಗೌಡ ಪೂಜಾರಿಮನೆ. ದಿನೇಶ್ ಮಡ್ತಿಲ,ಶ್ರೀ. ಕ್ಷೆ. ಧ.ಗ್ರಾ.ಯೋಜನೆ ಯೋಜನಾಧಿಕಾರಿ ಮಾಧವ ಗೌಡರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸುಳ್ಯ ವಲಯದ ಎಲ್ಲಾ ಒಕ್ಕೂಟ ಅಧ್ಯಕ್ಷರುಗಳು, ಪದಾಧಿಕಾರಿಗಳು, ನಿಕಟ ಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು, ಸೇವಾದಾರರು, ಶೌರ್ಯ ವಿಪತ್ತು ಘಟಕ ಬೆಳ್ಳಾರೆ ವಲಯ, ಸಂಘದ ಎಲ್ಲಾ ಸದಸ್ಯರು ಒಟ್ಟಾಗಿ 750 ಮಂದಿ ಭಾಗವಹಿಸಿದರು. ಬೆಳ್ಳಾರೆ ವಲಯದ ಮೇಲ್ವಿಚಾರಕರಾದ ಶ್ರೀಮತಿ ವಿಶಾಲ ನಿರೂಪಿಸಿದರು. ವೇದಾ ಹೆಚ್ ಶೆಟ್ಟಿ ಸ್ವಾಗತಿಸಿ, ದಾಮೋದರ್ ಕೊಡ್ತಿಲು ವಂದಿಸಿದರು.

ನಂತರ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .ಈ ಕಾರ್ಯಕ್ರಮದಲ್ಲಿ 10 ಮಂದಿ ಸಂಘದ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು. ಯೋಜನೆಯಿಂದ ದೊರಕುವ ಜನಮಂಗಳ ಕಾರ್ಯಕ್ರಮದಲ್ಲಿ ನೀಡುವ ವಾಟರ್ ಬೆಡ್, ಯು ಶೇಪ್ ವಾಕರ್, ವೀಲ್ ಚಯರ್, ಕ್ಷೇತ್ರದಿಂದ ಸಹಾಯಧನ ಮಂಜೂರಾದ ಕ್ರಿಟಿಕಲ್ ಫಂಡ್, ಪಿ ಆರ್ ಕೆ ಸೌಲಭ್ಯ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು. ಗ್ರಾಮದ ಸಾಧಕರಾದ ಎಸ್. ಎನ್. ಮನ್ಮಥ ಮತ್ತು ಪ್ರವೀಣ ಪವಿತ್ರಮಜಲು ಇವರನ್ನು ಗೌರವಿಸಲಾಯಿತು.











