ಯಾವುದೇ ಧರ್ಮಗಳು ಪರಸ್ಪರ ದ್ವೇಷಿಸುವುದನ್ನು ಕಲಿಸಲಿಲ್ಲ.ಎಲ್ಲಾ ಧರ್ಮಗಳು ಪರಸ್ಪರ ಪ್ರೀತಿಯನ್ನೇ ಕಲಿಸಿದೆ : ಮುಖಂಡರ ಅಭಿಮತ
ನಮ್ಮ ಧರ್ಮವನ್ನು ಆರಾಧಿಸುವ,ಗುರು ಹಿರಿಯರನ್ನು ಗೌರವಿಸುವುದರೊಂದಿಗೆ ಇತರ ಧರ್ಮವನ್ನು ಪ್ರೀತಿಸುವ ಕಾರಣಗಳಿಂದ ಸರ್ವಧರ್ಮೀಯರ ಮೇಲಿನ ಪ್ರೀತಿ ಮನಸ್ಸಿನಲ್ಲಿ ಹೆಚ್ಚುತ್ತದೆ ಹಾಗೂ ಸಮಾಜದಲ್ಲಿ ಸೌಹಾರ್ದತೆಗೆ ಕಾರಣವಾಗುತ್ತದೆ. ಯಾವುದೇ ಧರ್ಮಗಳು ಸಂಘರ್ಷವನ್ನು ಕಲಿಸಲಿಲ್ಲ ಪ್ರೀತಿ ಮತ್ತು ಸೌಹಾರ್ದತೆಯನ್ನು ಕಲಿಸಿದೆ ಎಂದು ಸಮ್ಮೇಳನದ ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖಂಡರುಗಳಾದ ಡಾ. ಲೀಲಾದರ್ ಕೆ ವಿ ಹಾಗೂ ಮುಖ್ಯ ಪ್ರಭಾಷಣಗಾರ ಇಕ್ಬಾಲ್ ಬಾಳಿಲ ರವರು ಅಭಿಪ್ರಾಯ ವ್ಯಕ್ತಪಡಿಸಿದರು.

ಫೆ. 2 ರಂದು ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಗೂನಡ್ಕದಲ್ಲಿ ನಡೆದ ಉರೂಸ್ ಸಮಾರಂಭದ ಸರ್ವಧರ್ಮ ಸಮ್ಮೇಳನದಲ್ಲಿ ಇವರುಗಳು ಮಾತನಾಡಿ ಗತಕಾಲದಲ್ಲಿ ಊರಿನ ಪರಿಸರಗಳು,ಮಸೀದಿ ಮಂದಿರ ಚರ್ಚ್ ಗಳನ್ನು ಶಾಂತಿಯ ಸಂಕೇತ ಮತ್ತು ಸೌಹಾರ್ತೆಯ ಮಂದಿರವಾಗಿ ಪ್ರತಿಯೊಬ್ಬರು ಕಾಣುತ್ತಿದ್ದರು.ಆದರೆ ಕಾಲಗಳು ಬದಲಾದಂತೆ ಬೇರೆ ಬೇರೆ ಕಾರಣಗಳಿಂದ ಜನರ ಮನಸ್ಸಿನಲ್ಲಿ ವೈಶಮ್ಯಗಳನ್ನು ಬೆಳೆಸಲು ಆರಂಭಿಸಿದಾಗ ಸಮಾಜದಲ್ಲಿ ಸೌಹಾರ್ದತೆ ಕೆಡಲು ಕಾರವಾಯಿತು. ಇಂತಹ ಸೌಹಾರ್ದ ಸಮ್ಮೇಳನ ವೇದಿಕೆಗಳು ಗತಕಾಲದ ವೈಭವವನ್ನು ಮತ್ತೆ ಸೃಷ್ಟಿಸಬೇಕಾಗಿದೆ ಎಂದು ಸಂದೇಶವನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹಿಯದ್ದೀನ್ ಜುಮಾ ಮಸೀದಿ ಪೇರಡ್ಕ ಇದರ ಅಧ್ಯಕ್ಷರಾದ ಟಿಎಂ ಶಹೀದ್ ತೆಕ್ಕಿಲ್ ವಹಿಸಿದ್ದರು.
ಸ್ಥಳೀಯ ಖತೀಬರಾದ ಅಹಮದ್ ನಈಮಿ ಫೈಝಿ ಅಲ್ ಮಅಬರಿ ದುವಾ ನೆರವೇರಿಸಿದರು.















ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸದಾನಂದ ಮಾವಜಿ ಸೌಹಾರ್ದತೆಯ ಸಂದೇಶ ಭಾಷಣವನ್ನು ಮಾಡಿ ಸಭಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕೆವಿಜಿ ಆಯುರ್ವೇದಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾದರ್, ಪ್ರೊಫೆಸರ್ ಡಾ. ಲಕ್ಷ್ಮೀಶ,ಡಾ. ಉಮ್ಮರ್ ಬೀಜದಕಟ್ಟೆ,ಸಂಪಾಜೆ ಚರ್ಚ್ ಆಡಳಿತ ಮಂಡಳಿಯ ಸದಸ್ಯ ಲೂಕಾಸ್ ಟಿ ಐ,ವಕೀಲ ರಶೀದ್ ಗೂನಡ್ಕ, ಮೊದಲಾದವರು ಮಾತನಾಡಿ ಸರ್ವಧರ್ಮ ಸಮ್ಮೇಳನದ ಗುರಿ ಮತ್ತು ಅದರ ಉದ್ದೇಶ ಸಮಾಜದ ಶಾಂತಿ ಮತ್ತು ಸೌಹಾರ್ದತೆಯ ಉಳಿವಿಗಾಗಿ ಮತ್ತು ಅದರ ರಕ್ಷಣೆಗಾಗಿ ಇರಬೇಕಾಗಿದೆ ಎಂದು ಸಂದೇಶ ನುಡಿಗಳನ್ನು ಹೇಳಿದರು.

ವೇದಿಕೆಯಲ್ಲಿ ಜಮ್ಮು-ಕಾಶ್ಮೀರ ಸಿ ಆರ್ ಪಿ ಎಫ್ ಇನ್ಸ್ಪೆಕ್ಟರ್ ಅನ್ವರ್ ಪಿಎಂ ತೆಕ್ಕಿಲ್, ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಬೂಬಕ್ಕರ್ ಅಡ್ಕಾರ್, ಸಂಪಾಜೆ ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಜಗದೀಶ್ ರೈ ಕೆ ಪಿ, ಮಂಗಳೂರು ಸಹಾಯಕ ಸಬ್ ಇನ್ಸ್ಪೆಕ್ಟರ್ ಸಾಧಿಕ್ ಪೇರಡ್ಕ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು ಬಿ ಚಕ್ರಪಾಣಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮೀಫ್ ಉಪಾಧ್ಯಕ್ಷ ಹಾಜಿ ಮುಸ್ತಫ ಜನತಾ, ಸುಳ್ಯ ಅಲ್ಪಸಂಖ್ಯಾತ ಸಹಕಾರಿ ಸಂಘ ನಿಯಮಿತ ಇದರ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಎಲಿಮಲೆ, ವಕೀಲ ಸಲೀಂ ಗೂನಡ್ಕ,ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಶರೀಫ್ ಕಂಠಿ, ಕೆಎಸ್ ಉಮ್ಮರ್, ನಾಮನಿರ್ದೇಶಕ ಸದಸ್ಯ ಸಿದ್ದಿಕ್ ಕೊಕ್ಕೋ, ಮಂಗಳೂರು ಪೊಲೀಸ್ ಇಲಾಖೆಯ ರಹೂಫ್ ಗೂನಡ್ಕ, ನಿವೃತ್ತ ಯೋಧ ಲಕ್ಷ್ಮೀನಾರಾಯಣ,ವಸಂತ ಗೌಡ ಪೆರಾಡ್ಕ,ಜಾಲ್ಸೂರು ಗ್ರಾಮ ಪಂಚಾಯತಿ ಸದಸ್ಯ ಮುಜೀಬ್ ಪೈಚಾರ್, ಮುಖಂಡರುಗಳಾದ ಆಲಿ ಹಾಜಿ , ಸಂತೋಷ್ ಕ್ರಾಸ್ತ, ಆಶ್ರಫ್ ಗುಂಡಿ, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕ್ಕೋಲು , ಮೊದಲಾದವರು ಭಾಗವಹಿಸಿದ್ದರು.
ಮುಹಿಯದ್ದೀನ್ ರುಪಾಯಿ ಅಸೋಷಿಯೇಷನ್ ಗೂನಡ್ಕ ಪೇರಡ್ಕ ಇದರ ಅಧ್ಯಕ್ಷ ಜಿ ಕೆ ಹಮೀದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಮ್ಮೇಳನದಲ್ಲಿ ಸ್ಥಳೀಯ ನೂರಾರು ಮಂದಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳಾದ ನಿವೃತ್ತ ಸೇನಾನಿಗಳು ಹಾಗೂ, ದಾನಿಗಳು ಮತ್ತು ಹಜ್ ಯಾತ್ರಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.










