ಶ್ರೀ ಮಹಾವಿಷ್ಣು ಯಕ್ಷಕಲಾ ತಂಡ ಉದಯಗಿರಿ ಮಾವಿನಕಟ್ಟೆ ಇದರ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನೆಯು ಸರಕಾರಿ ಪ್ರೌಢಶಾಲೆ ಎಲಿಮಲೆ ಯಲ್ಲಿ ಉದ್ಘಾಟನೆಗೊಂಡಿತು.
ಮಹಾವಿಷ್ಣು ದೈವಸ್ಥಾನ ಉದಯಗಿರಿ ಮಾವಿನಕಟ್ಟೆ ಇದರ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮಾವಿನಕಟ್ಟೆ ನಾಟ್ಯ ತರಭೇತಿ ಉದ್ಘಾಟಿಸಿದರು.
ಮುಖ್ಯ ಅಥಿತಿಗಳಾಗಿ ನಿವೃತ್ತ ಪ್ರಾoಶುಪಾಲ ಬಾಬು ಗೌಡ ಅಚ್ರಪ್ಪಾಡಿ ಮುಖ್ಯ ಅತಿಥಿಯಾಗಿದ್ದರು.















ಎಲಿಮಲೆ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಅಧ್ಯಕ್ಷತೆ ವಹಿಸಿದ್ದರು.
ಅಥಿತಿಗಳಾಗಿ ದೇವಚಳ್ಳ ಹಿ. ಪ್ರಾ. ಶಾಲೆ ಮುಖ್ಯ ಶಿಕ್ಷಕ ಶ್ರೀಧರ ಗೌಡ, ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಗದಾಧರ ಬಾಳುಗೋಡು, ಎಲಿಮಲೆ ಪ್ರೌಢ ಶಾಲೆಯ ಎಸ್. ಡಿ. ಎಂ ಸಿ. ಅಧ್ಯಕ್ಷ ಧನಂಜಯ ಬಾಳೆತೋಟ, ಎಲಿಮಲೆ ಪ್ರೌಢ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಅಂಬೆಕಲ್ಲು, ನೆಲ್ಲೂರು ಕೆಮ್ರಾಜೆ ಪ್ರಾ. ಕೃ. ಪ. ಸ. ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ, ಹಿಮ್ಮೆಳ ಕಲಾವಿದ ಬಾಲಕೃಷ್ಣ ಬೊಮ್ಮರು ಉಪಸ್ಥಿತರಿದ್ದರು.
ನಾಟ್ಯ ಗುರು ಶ್ಯಾಮ್ ಪ್ರಸಾದ್, ಪೂರ್ಣಿಮಾ ಮರ್ಕಂಜ ರವರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಕೆಯ ಮಹತ್ವ ತಿಳಿಸಿದರು.
ನಾಟ್ಯ ತರಭೇತಿಯ ಸಂಯೋಜಕರಾದ ಸಮಾಜ ವಿಜ್ಞಾನ ಶಿಕ್ಷಕ ವಸಂತ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.










