ನಡುಗಲ್ಲು ಸ. ಹಿ. ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಇತ್ತೀಚೆಗೆ 2024-25ನೇ ಶೈಕ್ಷಣಿಕ ವರ್ಷದ ಮೆಟ್ರಿಕ್ ಮೇಳ ಇತ್ತೀಚೆಗೆ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವರಾಮ ಉತ್ರoಬೆ ಉದ್ಘಾಟಿಸಿದರು.

ಕಾರ್ಯಕ್ರಮದ ಆಯೋಜನೆಯನ್ನು 5,6, 7ನೇ ತರಗತಿಯ ವಿದ್ಯಾರ್ಥಿಗಳು 14 ಮಳಿಗೆಗಳನ್ನು ನಿರ್ಮಿಸಿ ತಮ್ಮದೇ ಮಳಿಗೆಗಳಿಗೆ ವಿನೂತನ ಶೈಲಿಯಲ್ಲಿ ನಾಮಕರಣ ಮಾಡಿ ತಮ್ಮ ಮನೆಯ ಕೈತೋಟದಲ್ಲಿ ಬೆಳೆದ ತರಕಾರಿಗಳು, ಹಣ್ಣು ಹಂಪಲು ಗಳು, ಮನೆಯಲ್ಲಿ ತಯಾರಿತ ಖಾದ್ಯಗಳನ್ನು ತಂದಿರಿಸಿ ವ್ಯಾಪಾರ ಮಾಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳ, ಪೋಷಕರ, ಶಿಕ್ಷಕರ, ಎಸ್‌ಡಿಎಂಸಿಯ ವರ , ಶಾಲಾ ಸಮುದಾಯದವರ ಸಹಕಾರದೊಂದಿಗೆ ನಡೆಯಿತು.