














ಕಳಂಜ ಬಾಳಿಲ ಸಹಕಾರಿ ಸಂಘದ ಹಾಲಿ ಅಧ್ಯಕ್ಷರಾದ ಕೂಸಪ್ಪ ಗೌಡರು ನಮ್ಮ ವಿರುದ್ಧ ರಾಜಕೀಯ ಪ್ರೇರಿತ ಹೇಳಿಕೆ ನೀಡಿದ್ದಾರೆ ” ಎಂದು ಕಳಂಜ ವಿಶ್ವನಾಥ ರೈಯವರು ಹೇಳಿಕೆ ನೀಡಿದ್ದಾರೆ.
ಸಂಘದ 10 ವರ್ಷದ ಆಡಳಿತ ವೈಖರಿ ಬಗ್ಗೆ ಕಳಂಜ ಬಾಳಿಲ ಸಹಕಾರಿ ಸಂಘದ ಎಲ್ಲ ಸಕ್ರಿಯ ಸದಸ್ಯರಿಗೆ ತಿಳಿದಿರುವ ಸತ್ಯಾಸತ್ಯತೆ ಏನೆಂದರೆ ಹತ್ತು ವರ್ಷದ ಪ್ರಥಮ 5 ವರ್ಷದಲ್ಲಿ ಡಿಫಾಲ್ಟ್ ಅಧ್ಯಕ್ಷರುಗಳ ಆಡಳಿತ ವೈಖರಿ ಬಗ್ಗೆ ಹಾಗೂ ಈಗ ಚುನಾವಣೆಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಡಿಫಾಲ್ಟ್ ಸದಸ್ಯರುಗಳ ಬಗ್ಗೆ ಕೂಸಪ್ಪ ಗೌಡರಿಗೂ ತಿಳಿದಿರುವ ವಿಷಯ. ಆದರೂ ಡಿಫಾಲ್ಟ್ ಸದಸ್ಯರುಗಳ ಒತ್ತಡದ ಮೇರೆಗೆ ಅವರು ಬರೆದುಕೊಟ್ಟ ಹೇಳಿಕೆಗೆ ಅಧ್ಯಕ್ಷರು ಸಹಿ ಹಾಕಿ ಪತ್ರಿಕೆಗೆ ನೀಡಿರುವುದು ಸಹಕಾರಿ ಸಂಘದ ಸರ್ವ ಸದಸ್ಯರಿಗೂ ಬೇಸರವನ್ನು ಉಂಟು ಮಾಡಿದೆಯೆಂದು ತಿಳಿದುಕೊಂಡಿದ್ದೇನೆ. ಕೂಸಪ್ಪ ಗೌಡರ ಅವಧಿಯಲ್ಲಿ ಎಲ್ಲಾ ನಿರ್ದೇಶಕರುಗಳ ಆಕಾಂಕ್ಷೆಯಂತೆ ಕಾರ್ಯನಿರ್ವಹಿಸಿದ್ದಾರೆಂದು ಅವರ ಮೇಲೆ ಉತ್ತಮ ಅಭಿಪ್ರಾಯವನ್ನು ಪತ್ರಿಕೆಯಲ್ಲಿ ನಾನು ವ್ಯಕ್ತಪಡಿಸಿದ್ದೆ. ಆದರೂ ಅದನ್ನು ತಿರುಚಿ ಚುನಾವಣೆಗಾಗಿ ಸತ್ಯಾಸತ್ಯತೆಯನ್ನು ಸುಳ್ಳು ಹೇಳಿಕೆಯೆಂದು ಪತ್ರಿಕೆಯಲ್ಲಿ ನೀಡಿರುವುದು ಖಂಡನೀಯ ಹಾಗೂ ಇದು ಚುನಾವಣಾ ಗಿಮಿಕ್ಸ್ ಹೇಳಿಕೆಯೆಂದು ಎಲ್ಲಾ ಸದಸ್ಯರಿಗೆ ಅರ್ಥವಾಗಬಹುದು” ಎಂದು ವಿಶ್ವನಾಥ ರೈ ಹೇಳಿಕೆಯಲ್ಲಿ ತಿಳಿಸಿದ್ದಾರೆ.










