ಆಲೆಟ್ಟಿ ಗ್ರಾಮದ
ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಕಾಲಾವಧಿಜಾತ್ರೋತ್ಸವದ ಪೂರ್ವ ಭಾವಿ ಸಭೆಯು ಫೆ.6 ರಂದು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಕೋಲ್ಚಾರು ಅಧ್ಯಕ್ಷತೆಯನ್ನು ವಹಿಸಿದ್ದರು.
















ಮುಂದಿನ ಮಾರ್ಚ್ ತಿಂಗಳ 11,12 ಮತ್ತು 13 ರಂದು ನಡೆಯಲಿರುವ ಕಾಲಾವಧಿ ಜಾತ್ರೋತ್ಸವದ ರೂಪು ರೇಷೆಯನ್ನು ವಿಮರ್ಶಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಯ ಕುರಿತು ಹಾಗೂ ಆಮಂತ್ರಣ ಪತ್ರ ಮುದ್ರಣದ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಸಮಿತಿ ಸಕ್ರಿಯ ಸದಸ್ಯರಾಗಿದ್ದು ಇತ್ತೀಚೆಗೆ ಅಗಲಿದ ಗಿರಿಜಾಶಂಕರ ತುದಿಯಡ್ಕ ರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಕೋರಲಾಯಿತು.
ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುಧಾಮ ಆಲೆಟ್ಟಿ, ಪ್ರಧಾನ ಅರ್ಚಕ ಶಿವಪ್ರಸಾದ್ ಕೆದಿಲಾಯ,
ಭಜನಾ ಸಂಘದ ಅಧ್ಯಕ್ಷ ಹೂವಾನಂದ ಬಾರ್ಪಣೆ ಉಪಸ್ಥಿತರಿದ್ದರು.
ವ್ಯ.ಸ.ಸದಸ್ಯರಾದ ರಾಧಾಕೃಷ್ಣ ಕೋಲ್ಚಾರು, ತಂಗವೇಲು ನಾಗಪಟ್ಟಣ, ಬಾಬು ಗೌಡ ನಾಗಪಟ್ಟಣ, ಗೋಪಾಲಕೃಷ್ಣ ಭಟ್ ಸುಳ್ಯ, ವಿಷ್ಣು ಪ್ರಕಾಶ್ ನಾರ್ಕೋಡು, ಆನಂದ ಗೌಡ ನಾಗಪಟ್ಟಣ, ಶ್ರೀಮತಿವಿಜಯಕುಮಾರಿ ನಾಗಪಟ್ಟಣ, ಜೆ.ಕೆ.ರೈ ನಾರ್ಕೋಡು, ಪ್ರಶಾಂತ್ ಕೋಲ್ಚಾರು, ಅಶ್ವಿನ್ ಅಡ್ಪಂಗಾಯ, ಸೆಲ್ವಂ ನಾಗಪಟ್ಟಣ, ಸಿಬ್ಬಂದಿ
ಶರತ್ ಗುಡ್ಡೆಮನೆ, ರಾಮ್ ಸುಂದರಂ ನಾಗಪಟ್ಟಣ ರವರು ಭಾಗವಹಿಸಿದರು.










