ಶ್ರೀಮತಿ ಸೌಭದ್ರೆ ದಳ ನಿಧನ

0

ಬಾಳಿಲ ಗ್ರಾಮದ ಹಿರಿಯ ಸಹಕಾರಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷ ಎಸ್.ಬಿ. ದಳರವರ ಪತ್ನಿ ಶ್ರೀಮತಿ ಸೌಭದ್ರೆ ಇಂದು (ಫೆ. 7ರಂದು) ನಿಧನರಾದರು. ಇವರಿಗೆ 81 ವರ್ಷ ವಯಸ್ಸಾಗಿತ್ತು.


ಮೃತರು ಪತಿ ಎಸ್.ಬಿ. ದಳ, ಪುತ್ರ ಸುಳ್ಯದಲ್ಲಿ ನೋಟರಿ ಹಾಗೂ ನ್ಯಾಯವಾದಿಯಾಗಿರುವ ದಳ ಸುಬ್ರಾಯ ಭಟ್, ಪುತ್ರಿಯರಾದ ಶ್ರೀಮತಿ ವಿನಯ ಶಿವಶಂಕರ ಮುಡಿಪು, ಶ್ರೀಮತಿ ವಿಜಯ ಗಣರಾಜ ಬನಾರಿ, ಸಹೋದರರಾದ ಲಕ್ಷ್ಮೀನಾರಾಯಣ ಭಟ್ ಸುರತ್ಕಲ್, ಸುಬ್ರಹ್ಮಣ್ಯ ಭಟ್ ಕಣಿಯೂರು, ಸಹೋದರಿಯರಾದ ಶ್ರೀಮತಿ ಲಲಿತಾ ಮಿತ್ತೂರು, ಶ್ರೀಮತಿ ಸುಶೀಲ ಮಚ್ಚಿಮಲೆ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.