ಶ್ರೀ ಪರಿವಾರ ಸದಾಶಿವ ಪಂಚಲಿಂಗೇಶ್ವರ ದೇವರ ಕನ್ನಡ ಭಕ್ತಿಗೀತೆ ‘ಶ್ರೀ ಪಂಚಲಿಂಗೇಶ್ವರ ನಮಃ’ ಬಿಡುಗಡೆ

0

ಪಂಜದ ಶ್ರೀ ಪರಿವಾರ ಸದಾಶಿವ ಪಂಚಲಿಂಗೇಶ್ವರ ದೇವರ ಕನ್ನಡ ಭಕ್ತಿಗೀತೆ ‘ಶ್ರೀ ಪಂಚಲಿಂಗೇಶ್ವರ ನಮಃ’ ಬಿಡುಗಡೆಗೊಂಡಿತ್ತು.

ಫೆಬ್ರವರಿ 6 ರಂದು ಪರಿವಾರ ಸದಾಶಿವ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವದ ಸುಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮೋಕ್ತೇಸರ ಡಾ||ದೇವಿಪ್ರಸಾದ್ ಕಾನತ್ತೂರು ರವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪದಾಧಿಕಾರಿಗಳು ಹಾಗೂ ರೋಹಿತ್ ಆಚಾರ್ಯ ಚೀಮುಳ್ಳು, ಜನಾರ್ಧನ ನಾಗತೀರ್ಥ ಪಂಜ, ಭಕ್ತಿ ಗೀತೆಯ ರಚನೆಕಾರ ನಿರಂಜನ್ ಕಡ್ಲಾರು, ಗಾಯಕಿ ಅಂಕಿತಾ ಆಚಾರ್ಯ ಕಡ್ಲಾರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಶರತ್ ಬಿಳಿನೆಲೆಯವರ ಸಂಗೀತ ಹಾಗೂ ಇಂದುಧರ ಹಳೆಯಂಗಡಿಯವರ ಸಂಕಲನವಿದೆ,

ಈ ಭಕ್ತಿಗೀತೆಯಲ್ಲಿ ಸ್ಟುಡಿಯೋ ಚಿತ್ರೀಕರಣ ಮತ್ತು ರೆಕಾರ್ಡಿಂಗ್ ಮತ್ತು ಮಾಸ್ಟರ್ ರಿಂಗ್ ಅನ್ನು ಮಿಥುನ್ ರಾಜ್ ವಿದ್ಯಾಪುರ, ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಕಬಕ ಇವರು ಮಾಡಿದ್ದಾರೆ.