ಮುರುಳ್ಯ ಶಾಲೆಯಲ್ಲಿ ಮೆಟ್ರಿಕ್ ಮೇಳ

0

ಮುರುಳ್ಯ ಸರಕಾರಿ ಶಾಲೆಯಲ್ಲಿ ಮೆಟ್ರಿಕ್ ಮೇಳ ನಡೆಯಿತು.


ಮುಖ್ಯ ಅತಿಥಿ ಶಿವಪ್ಪ ಗೌಡ ಕುದ್ಪಾಜೆಯವರು ಭಾಗವಹಿಸಿ ಮಾತನಾಡಿ, ಕಾರ್ಯಕ್ರಮವು ವಿದ್ಯಾರ್ಜನೆಯೊಂದಿಗೆ ಜ್ಞಾನರ್ಜನೆಗಳಿಗೆ ಪೂರಕವಾಗಿದೆ ಹಾಗೂ ಪೋಷಕರೊಟ್ಟಿಗೆ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸಂತೆಯಲ್ಲಿ ಮಕ್ಕಳ ಉಮೇದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹದ ಮಾತುಗಳನ್ನಾಡಿದರು.

ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷ ಅವಿನಾಶ್ ದೇವರಮಜಲು ಅಧ್ಯಕ್ಷತೆ ವಹಿಸಿ ಪೋಷಕರನ್ನು ಮತ್ತು ಶಿಕ್ಷಕರನ್ನು ಮಕ್ಕಳನ್ನು ಕಾರ್ಯಕ್ರಮದಲ್ಲಿ ತಯಾರು ಮಾಡಿದ್ದಕ್ಕಾಗಿ ಅಭಿನಂದನಾ ಮಾತುಗಳನ್ನಾಡಿದರು ಪೋಷಕರು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕ ವೃಂದ ಸಹಕರಿಸಿದರು. (ವರದಿ : ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ)