ಸುಳ್ಯ ವಕೀಲರ ಸಂಘದ ಕಚೇರಿಗೆ ಹೈಕೋರ್ಟ್ ನ್ಯಾಯಾಧೀಶರು ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರು ಭೇಟಿ

0

ಸುಳ್ಯದ ಕೋರ್ಟ್ ಕಟ್ಟಡವನ್ನು ಶೀಘ್ರವಾಗಿ ನವೀಕೃತಗೊಳಿಸಿಕೊಡುವಂತೆ ಸುಳ್ಯ ವಕೀಲರ ಸಂಘದಿಂದ ಮನವಿ

ಸುಳ್ಯ ವಕೀಲರ ಸಂಘದ ಕಚೇರಿಗೆ ರಾಜ್ಯ ಹೈಕೋರ್ಟ್ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ ಜೋಶಿ ರವರು ಸುಳ್ಯ ವಕೀಲರ ಸಂಘದ ಅಧ್ಯಕ್ಷರ ಕೋರಿಕೆಯ ಮೇರೆಗೆ ಭೇಟಿ ನೀಡಿದರು.

ಫೆ.8ರಂದು ಸುಳ್ಯದಲ್ಲಿ ನ್ಯಾಯಾಧೀಶರ ವಸತಿ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಇವರನ್ನು ಸುಳ್ಯ ವಕೀಲರ ಸಂಘದ ವತಿಯಿಂದ ಸಂಘದ ಕಚೇರಿಗೆ ಆಹ್ವಾನ ನೀಡಿದ ಮೇರೆಗೆ ನ್ಯಾಯಾಧೀಶರುಗಳು ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿರವರು ನ್ಯಾಯಾಧೀಶರುಗಳಿಗೆ ಹೂಗುಚ್ಚ ನೀಡಿ ಹಾಗೂ ಶಾಲು ಹೊದಿಸಿ ಗೌರವಿಸಿದರು. ಈ ವೇಳೆ ಜಿಲ್ಲಾ ನ್ಯಾಯಧೀಶರು ಗಳಾದ ಮಲ್ಲಿಕಾರ್ಜುನ, ಶ್ರೀಮತಿ ಸರಿತಾ ರವರು ಉಪಸ್ಥಿತರಿದ್ದರು.

ಸಭೆಯಲ್ಲಿ ಸುಳ್ಯ ವಕೀಲರ ಸಂಘದ ವತಿಯಿಂದ ನ್ಯಾಯಾಧೀಶರುಗಳಿಗೆ ಮನವಿಯನ್ನು ನೀಡಿ ‘ಸುಳ್ಯ ನ್ಯಾಯಾಲಯ ಕಟ್ಟಡವನ್ನು ಆದಷ್ಟು ಶೀಘ್ರದಲ್ಲಿ ಆಧುನಿಕರಣ ಗೊಳಿಸಿಕೊಡಲು ಹಾಗೂ ಕಡಬ ತಾಲೂಕಿನಲ್ಲಿ ನೂತನ ನ್ಯಾಯಾಲಯ ಆರಂಭಗೊಳ್ಳಲಿದ್ದು ಸಾರ್ವಜನಿಕರಿಗೆ ಸಹಕಾರ ಆಗುವ ನಿಟ್ಟಿನಲ್ಲಿ ಅಲ್ಲಿಯ ಅಪೀಲು ಕೇಸುಗಳನ್ನು ಸುಳ್ಯದ ಹಿರಿಯ ನ್ಯಾಯಾಲಯದ ವ್ಯಾಪ್ತಿಗೆ ನೀಡಿ ಸಾರ್ವಜನಿಕ ಕಕ್ಷಿದಾರರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಒದಗಿಸಿಕೊಡುವಂತೆ ವಿನಂತಿಸಿ ಕ್ಕೊಂಡರು.

ಮನವಿ ಸ್ವೀಕರಿಸಿದ ನ್ಯಾಯಾಧೀಶರುಗಳು ಸ್ಪಂದಿಸಿ ಇದರ ಬಗ್ಗೆ ತಮ್ಮ ಭಾಷಣದ ವೇಳೆ ಮಾತನಾಡಿ ಇದರ ಬಗ್ಗೆ ಆದ್ಯತೆ ನೀಡಿ ಕ್ರಮ ಕೈಗೊಳ್ಳುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿರುವ ಅವರು ಮುಂದಿನ ೫ ವರ್ಷಗಳಲ್ಲಿ ಪೇಪರ್ ಲೆಸ್ (ಇ ಕೋರ್ಟ್) ನ್ಯಾಯಾಲಯಗಳು ಬರುವ ಕಾರಣ ಎಲ್ಲಾ ನ್ಯಾಯಾವಾಧಿಗಳು ಅದಕ್ಕೆ ಹೊಂದಿಕೊಳ್ಳುವ ತರಬೇತಿಗಳನ್ನು ಪಡೆದುಕೊಳ್ಳುವುದು ಉತ್ತಮ ಎಂದು ಸಲಹೆಗಳನ್ನು ನೀಡಿದರು.

ವೇದಿಕೆಯಲ್ಲಿ ಸುಳ್ಯ ನ್ಯಾಯಾಲಯದ ನ್ಯಾಯಧೀಶರುಗಳದ ಬಿ ಮೋಹನ್ ಬಾಬು, ಕು. ಅರ್ಪಿತಾ ಹಾಗೂ ಸಂಫದ ಕಾರ್ಯದರ್ಶಿ ಡಿ.ಪಿ. ಜಗಧೀಶ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ಜಗಧೀಶ್ ಸ್ವಾಗತಿಸಿ, ವಕೀಲರುಗಳಾದ ಕುಸುಮಾಧರ ಕುತ್ತಿಮುಂಡ ವಂದಿಸಿ, ಹರೀಶ್ ಬೂಡುಪನ್ನೆ ಕಾರ್ಯಕ್ರಮ ನಿರೂಪಿಸಿದರು.

ಈ ಸಂಧರ್ಭದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಹಿರಿಯ ಕಿರಿಯ ವಕೀಲರುಗಳು ಭಾಗವಹಿಸಿದ್ದರು.

ಕೆ ವಿ ಜಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯ ಕೃಷ್ಣ, ಆಡಳಿತ ಅಧಿಕಾರಿ ದಾಮೋದರ ಗೌಡರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.