ಜಾಲ್ಸೂರು ಗ್ರಾಮದ ಅಡ್ಕಾರಿನ ನಿವೃತ್ತ ವನಪಾಲಕರಾದ ದಿ. ಶಿವರಾಮ ಬಲ್ಯಾಯ ಅವರ ವೈಭವ ಸಮಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮವು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಫೆ.10ರಂದು ನಡೆಯಿತು.
ನಿವೃತ್ತ ಅರಣ್ಯಾಧಿಕಾರಿ ಲಿಂಗಪ್ಪ ಕೆ. ಎಸ್. ಹಾಗೂ ಸತೀಶ್ ಕೆಮ್ಮಾಯಿ ಅವರು ದಿ. ಶಿವರಾಮ ಬಲ್ಯಾಯ ಅವರು ಅರಣ್ಯ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯ ಕುರಿತು ಮಾತನಾಡಿ ನುಡಿನಮನ ಸಲ್ಲಿಸಿದರು.















ಈ ಸಂದರ್ಭದಲ್ಲಿ ಮೃತರ ಪತ್ನಿ ಸರೋಜಿನಿ ಅಡ್ಕಾರು, ಪುತ್ರರಾದ ಶಶಿ ಅಡ್ಕಾರು, ಸಂದೇಶ್ ಅಡ್ಕಾರು, ಸುದೀಶ್ ಅಡ್ಕಾರು, ಪುತ್ರಿಯರಾದ ಸಹನ, ಸುಮನ, ಸಹೋದರರಾದ ಗೋಪಡ್ಕಾರ್, ಚಂದ್ರ ಅಡ್ಕಾರು ಸೇರಿದಂತೆ ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.










