ಜಟ್ಟಿಪಳ್ಳ :ಹಯಾತುಲ್ ಇಸ್ಲಾಂ ಕಮಿಟಿ ವತಿಯಿಂದ ವಾರ್ಷಿಕ ಜಲಾಲಿಯ ರಾತೀಬ್ ಮತ್ತು ದಿಖ್ರ್ ದುವಾ ಮಜ್ಲಿಸ್

0

ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಕಮಿಟಿ ರಿ.ಇದರ ಆಶ್ರಯದಲ್ಲಿ ನಡೆಸಿಕೊಂಡು ಬರುತ್ತಿರುವ ಜಲಾಲಿಯ ರಾತೀಬ್ ವಾರ್ಷಿಕ ದಿಖ್ರ್ ಮತ್ತು ದುವಾ ಮಜ್ಲಿಸ್ ಕಾರ್ಯಕ್ರಮ ಫೆಬ್ರವರಿ 10 ರಂದು ಜಟ್ಟಿಪಳ್ಳ ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಆಧ್ಯಾತ್ಮಿಕ ಸಂಗಮಗಳು, ಪ್ರಾರ್ಥನಾ ಮಜ್ಲಿಸ್ ಗಳು ನೂರಾರು ಜನರ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರವನ್ನು ನೀಡುವ ಮತ್ತು ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಬದುಕನ್ನು ನೀಡುವ ಕಾರ್ಯವಾಗಿದೆ.
ಇಂದಿನ ಈ ಕಾರ್ಯಕ್ರಮದ ಫಲವಾಗಿ ಇಡೀ ವಿಶ್ವ ಜನತೆಗೆ ಶಾಂತಿ ನೆಮ್ಮದಿಯ ಬದುಕು ದೇವರು ಕರುಣಿಸಲಿ ಎಂದು ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದ ಅಲ್ ಹಾಜ್ ಅಸ್ಸಯ್ಯದ್ ಜಹಪರ್ ಸ್ವಾದಿಕ್ ತಂಙಳ್ ರವರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಸ್ಸಯ್ಯದ್ ಕುಂಞಿ ಕೋಯ ಸಅದಿ ತಂಙಳ್ ನಾವೂರು ರವರು ಉದ್ಘಾಟಿಸಿ ಹಿತ ವಚನ ಭೋದನೆ ಮಾಡಿದರು.

ಜಲಾಲಿಯ ರಾತಿಬ್ ಮಜ್ಲಿಸ್ ನಲ್ಲಿ ಗಾಂಧಿನಗರ ಜುಮ್ಮಾ ಮಸ್ಜಿದ್ ನ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ, ಅಲ್ ಹಾಜ್ ಶೌಖತ್ ಅಲಿ ಸಖಾಫಿ ಮೊಗರ್ಪಣೆ, ಅಬೂಬಕ್ಕರ್ ಸಖಾಫಿ ಅನ್ಸಾರಿಯಾ ಮುದರ್ರಿಸ್, ಹುಸೈನ್ ಪಾಷಾ ತಂಙಳ್ ಅನ್ಸಾರಿಯಾ, ಸಿರಾಜುದ್ದೀನ್ ಸಖಾಫಿ ಸದರ್ ಮುಅಲ್ಲಿಮ್ ಗಾಂಧಿನಗರ ಮದ್ರಸಾ, ಮುಅಲ್ಲಿಮರುಗಳಾದ ನಿಝಾರ್ ಸಖಾಫಿ,ಹನೀಫ್ ಸಖಾಫಿ, ಕಬೀರ್ ಹಿಮಮಿ,ಮುಖಂಡರುಗಳಾದ ಹಾಜಿ ಮುಸ್ತಫಾ ಜನತಾ, ಅಬ್ದುಲ್ ಲತೀಫ್ ಹರ್ಲಡ್ಕ, ಹಾಜಿ ಅಬ್ದುಲ್ ರಜ್ಜಾಕ್ ಶೀತಲ್, ಅಬೂಬಕ್ಕರ್ ಜಟ್ಟಿಪಳ್ಳ, ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಕೆ ಎಸ್ ಉಮ್ಮರ್, ಶರೀಫ್ ಕಂಠಿ ಹಾಗೂ ಇನ್ನೂ ಅನೇಕ ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು.

ಸ್ಥಳೀಯ ಮಸೀದಿ ಮುಅಲ್ಲಿಮರುಗಳಾದ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಪ್ರಾಸ್ತವಿಕ ಮಾತನಾಡಿ, ಸಿರಾಜ್ ಸಅದಿ ಅಲೆಕ್ಕಾಡಿ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಕಮಿಟಿಯ ಅಧ್ಯಕ್ಷರಾದ ಬಶೀರ್ ಬಾಳೆಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಫೈಝಲ್,ಮಾಜಿ ಅಧ್ಯಕ್ಷರುಗಳಾದ ಶರೀಫ್ ಜಟ್ಟಿಪಳ್ಳ, ರಶೀದ್ ಜಟ್ಟಿ ಪಳ್ಳ,ಎನ್ ಎ ಅಬ್ದುಲ್ಲ,ಹಾಜಿ ವಿ ಕೆ ಅಬೂಬಕ್ಕರ್,ಜಲಾಲಿಯ ಮಜ್ಲಿಸ್ ಉಸ್ತುವಾರಿ ತಾಜುದ್ದೀನ್ ಎಂ ಎಸ್ ಹಾಗೂ ಕೋಶಾಧಿಕಾರಿ,ಹಾಗೂ ಸರ್ವ ಸದಸ್ಯರುಗಳು ಸಹಕರಿಸಿದರು.

ಮಾಜಿ ಕಾರ್ಯದರ್ಶಿ ಕಬೀರ್ ಜಟ್ಟಿಪಳ್ಳ ಸ್ವಾಗತಿಸಿದರು. ಸಾವಿರಾರು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಸೀರಣಿ ವಿತರಣೆ ನಡೆಯಿತು.