ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಇಂಗ್ಲಿಷ್ ಸಂವಹನ ಕಲಾ ಪ್ರದರ್ಶನ

0

ಸುಳ್ಯ ತಾಲೂಕಿನ ಪ್ರಥಮ ಕಾರ್ಯಾಗಾರ – ಆಸಕ್ತಿಯಿಂದ ಭಾಹವಹಿಸಿದ ಮಕ್ಕಳು

ಸುಳ್ಯ ಕ್ಲಸ್ಟರ್ ವಿಭಾಗದ ಸರಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಫೆ.10 ರಂದು ಸೈಂಟ್ ಬ್ರಿಜಿಡ್ಸ್ ಅನುದಾನಿತ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀತಲ್ ಯು ಕೆ. ಕಾರ್ಯಕ್ರಮವನ್ನು ಉದ್ಘಾಟಿಸಿ ‘ಇಂಗ್ಲಿಷ್ ಭಾಷೆಯು ಜಾಗತಿಕ ಭಾಷೆ. ವ್ಯಾವಹಾರಿಕವಾಗಿ ಇಂಗ್ಲಿಷ್ ಭಾಷೆಯ ಅವಶ್ಯಕತೆ ಪ್ರತಿಯೊಬ್ಬರಿಗೂ ಎಂದು ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಸೈಂಟ್ ಬ್ರಿಜಿಡ್ಸ್ ಸಂಸ್ಥೆಯ ಸಂಚಾಲಕರಾದ ವಂದನೀಯ ವಿಕ್ಟರ್ ಡಿಸೋಜರವರು ಮಾತನಾಡಿ ‘ಜಗತ್ತಿನಲ್ಲಿ ಹಲವು ಭಾಷೆಗಳಿವೆ. ಇಂಗ್ಲಿಷ್ ಭಾಷೆಯು ಬೇರೆ ಬೇರೆ ದೇಶದವರ ಸಂಸ್ಕೃತಿಯನ್ನು ತಿಳಿಯಲು ಮತ್ತು ಸಂವಹನ ನಡೆಸಲು ಅವಶ್ಯಕ’ ಎಂದು ಹೇಳಿದರು.

ಸುಳ್ಯ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಮತಿ ಮಮತಾ ಕೆ. ಯವರು ಸುಳ್ಯ ತಾಲೂಕಿನಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ ಈ ಇಂಗ್ಲೀಷ್ ಸಂವಹನ ಕಾರ್ಯಕ್ರಮದಲ್ಲಿ ಸುಳ್ಯ ಕ್ಲಸ್ಟರ್ ನ 160 ಮಕ್ಕಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಆಂಗ್ಲಭಾಷಾ ಕಲಿಕೆಯಲ್ಲಿ ಆಸಕ್ತಿ ಮತ್ತು ಸಂವಹನ ಜ್ಞಾನ ಹೆಚ್ಚಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಉದ್ಘಾಟನಾ ಸಮಾರಂಭದ ವೇದಿಕೆಯಿಂದ ನಡೆಯುವ ವಿಶೇಷ ಚಟುವಟಿಕೆಗಳ ನಿರ್ವಹಣೆಯನ್ನು ಸಮಾರೋಪದ ವರೆಗಿನ ಎಲ್ಲ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ಇಂಗ್ಲಿಷ್ ಭಾಷೆಯಲ್ಲಿ ನಿರ್ವಹಿಸಿದ್ದು ವಿಶೇಷವಾಗಿತ್ತು.
ಸೈಂಟ್ ಬ್ರಿಜಿಡ್ಸ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಆಂಟೋನಿ ಮೇರಿ , ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಸುಂದರ್ ಮತ್ತು ಶ್ರೀಮತಿ ರಮ್ಯಾ ಮತ್ತು ಶ್ರೀಮತಿ ಅನುರಾಧ ಉಪಸ್ಥಿತರಿದ್ದರು.

ಬ್ರಹ್ಮಾವರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಉದಯ್ ಕೋಟ ಸ್ಪೋಕನ್ ಇಂಗ್ಲಿಷ್ ಕಾರ್ಯಾಗಾರವನ್ನು ಶಿಕ್ಷಕರಿಗೆ ನಡೆಸಿದ್ದರು. ಅವರ ಮಾರ್ಗದರ್ಶನದಂತೆ ಸುಳ್ಯ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಮಮತಾ ಕೆ. ಯವರು ಈ ಫೆಸ್ಟ್ ನ್ನು ಸಂಘಟಿಸಿದ್ದರು.

ಕತೆ, ಹಾಡು, ಕುಣಿತ ಸಂಭ್ರಮದ ಫೆಸ್ಟ್

ಸ್ಪೋಕನ್ ಇಂಗ್ಲಿಷ್ ಫೆಸ್ಟ್ ನಲ್ಲಿ ಇಂಗ್ಲಿಷ್ ಸಂಭಾಷಣೆ, ಸಮೂಹ ಗೀತೆ , ಪ್ರಹಸನ, ಆಶುಭಾಷಣ , ನಾಟಕ , ಕಲಿಕಾ ಮಾದರಿಗಳ ಪ್ರದರ್ಶನ, ಅಭಿನಯ ಗೀತೆ, ಕಥೆ ಹೇಳುವುದು , ರಸಪ್ರಶ್ನೆ ಹೀಗೆ ವಿಶೇಷ ಚಟುವಟಿಕೆಗಳಿಂದ ಇಡೀ ದಿನದ ಕಾರ್ಯಕ್ರಮ ಅತ್ಯಾಕರ್ಷಕವಾಗಿ ನಡೆಯಿತು. ಶಿಕ್ಷಕರು,ಪೋಷಕರು.ವಿದ್ಯಾರ್ಥಿಗಳು ಸಂಭ್ರಮದಿಂದಲೇ ಭಾಗವಹಿಸಿದ್ದು ವಿಶೇಷವಾಗಿತ್ತು.