ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಖಿಲ ಭಾರತೀಯ ನಾಥ ಸಂಪ್ರದಾಯದ ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಶ್ರೀ 1008 ಮಹಾಂತ ಯೋಗಿ ಪೀರ್ ರಮನಾಥ್ ಜಿ ಮಹಾರಾಜ್ ಸ್ವಾಮೀಜಿಯವರು
ಫೆ.11 ರಂದು ಭೇಟಿ ನೀಡಿದರು.
















ತಮ್ಮ ಅನುಯಾಯಿಗಳೊಂದಿಗೆ ಭೇಟಿ ನೀಡಿದ ಅವರನ್ನು ದೇವಳದ ವತಿಯಿಂದ ಪೂರ್ಣ ಕುಂಭ ದೊಂದಿಗೆ ಸ್ವಾಗತಿಸಲಾಯಿತು.

ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ತುಳಸಿ ಹಾರ ಹಾಕಿ ಸ್ವಾಮೀಜಿಯವರನ್ನು ಗೌರವಿಸಿದರು. ದೇವಳದ ಆನೆ ಶ್ರೀಗಳನ್ನು ಸ್ವಾಗತಿಸಿ ಆಶೀರ್ವದಿಸಿತು. ಶ್ರೀ ದೇವಳಕ್ಕೆ ಭೇಟಿ ನೀಡಿದ ಸ್ವಾಮೀಜಿಯವರು ದೇವರ ದರ್ಶನವನ್ನು ಪಡೆದರು. ಮುಖ್ಯ ಅರ್ಚಕರಾದ ಸೀತಾರಾಮ ಎಡಪಡಿತಾಯ ಅವರು ದೇವರ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ದೇವಳದ ಶಿಷ್ಟಾಚಾರ ಅಧಿಕಾರಿ ಜಯರಾಮರಾವ್ ಸ್ಥಳೀಯರಾದ ಕುಮಾರ ಬಿಲದ್ವಾರ ಮತ್ತಿತರರು ಹಾಜರಿದ್ದರು.










