ಅಜ್ಜಾವರ : ವಿಕಲಚೇತನ ದಿನಾಚರಣೆ

0

ಅಜ್ಜಾವರ ಗ್ರಾಮ ಪಂಚಾಯತ್ ಸಭಾಂಗಣದಲ್ಲಿಂದು ವಿಶ್ವ ವಿಕಲಚೇತನ ದಿನಾಚರಣೆ ಮತ್ತು ವಿಕಲ ಚೇತನರ ಗ್ರಾಮಸಭೆ ನಡೆಯಿತು.
ಸಭಾಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದೇವಕಿ ವಿಷ್ಣು ನಗರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಶೇಷ ಚೇತನರ ತಾಲೂಕು ಸಂಯೋಜಕರಾದ ಚಂದ್ರ ಶೇಖರ.ಬಿ. ಮಾಹಿತಿ ನೀಡಿದರು.

ಈ ಗ್ರಾಮ ಸಭೆಯಲ್ಲಿ ಆರೋಗ್ಯ ಮಾಹಿತಿಯನ್ನು ಶ್ರೀಮತಿ ಜಯಶ್ರೀ ಅರೋಗ್ಯ ಸಹಾಯಕಿ ನೀಡಿದರು. ಮತ್ತು ಬ್ಯಾಂಕ್ ಮಾಹಿತಿಯನ್ನು ಕೆನಾರ ಬ್ಯಾಂಕ್ ಆಪ್ತ ಸಮಾಲೋಚಕಿ ಶ್ರೀಮತಿ ಸುಜಾತ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ನಿಂದ ಸಿಗುವ 5ಶೇ ಸ್ವಂತ ಸಂಪನ್ಮೂಲ ಅನುದಾನದಲ್ಲಿ ಪಡೆಯುವ ಸೌಲಭ್ಯ ಮಾಹಿತಿ ಯನ್ನು ಗ್ರಾಮೀಣ ವಿಕಲ ಚೇತನ ಪುನರ್ವಸತಿ ಕಾರ್ಯಕರ್ತರಾದ ಉಮ್ಮರ್ ಬಿ ಮಾಹಿತಿ ನೀಡಿದರು.ಈ ಸಭೆಯಲ್ಲಿ ಉಪಾಧ್ಯಕ್ಷರಾದ ಅಬ್ದುಲ್ಲ ಪಂಚಾಯತ್ ಸದಸ್ಯರುಳಾದ ಪ್ರಸಾದ್ ಕುಮಾರ್ ರೈ, ಲೀಲಾ ಮನಮೋಹನ, ಶ್ವೇತ ಕುಮಾರಿ, ರಾಹುಲ್ ಎ, ಸತ್ಯವತಿ,ವಿಶ್ವನಾಥ ಮುಳ್ಯ, ಸುಳ್ಯ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬಾಸ್ ಎ ಬಿ ಸಮುದಾಯ ಅರೋಗ್ಯಾಧಿಕಾರಿ ಭವ್ಯ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಮಾಲ ಎ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ವಿಶೇಷ ಚೇತನರು, ವಿಶೇಷ ಚೇತನರ ಪೋಷಕರು ಭಾಗವಹಿಸಿದ್ದರು. ಸ್ವಾಗತ ಮತ್ತು ಧನ್ಯವಾದವನ್ನು ಉಮ್ಮರ್ ಬಿ ನೆರವೇರಿಸಿದರು.