ಸಂಪಾಜೆ ಕಲ್ಲುಗುಂಡಿಯ
ನೆಲ್ಲಿಕುಮೇರಿ ಶ್ರೀ ಮುತ್ತುಮಾರಿಯಮ್ಮ, ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ನವಗ್ರಹಗಳು ಹಾಗೂ ಸಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.18 ಮತ್ತು 19ರಂದು ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.















ಫೆ.18ರಂದು
ಸಂಜೆ ಗಂಟೆ 6.00ಕ್ಕೆತಂತ್ರಿಗಳ ಆಗಮನವಾಗಿ ಬಳಿಕ ವಿವಿಧ ವೈದಿಕ ಕಾರ್ಯಕ್ರಮ, ಸುದರ್ಶನ ಹೋಮ, ರಾಕ್ಷೋಘ್ನ ಹೋಮ ಇತ್ಯಾದಿ ನಡೆಯಲಿದೆ.
ಫೆ. 19ರಂದು ಪೂ.ಗಂಟೆ 6.00 ರಿಂದ ಗಣಪತಿ ಹೋಮ,
ಪೂ.ಗಂಟೆ 8.36 ರ ಮೀನ
ಲಗ್ನದ ಶುಭ ಮುಹೂರ್ತದಲ್ಲಿ
ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ,
ಅ.ಗಂಟೆ 12.00 ಕ್ಕೆ ಮಹಾಪೂಜೆ, ನಿತ್ಯ ನೈಮಿತ್ಯಗಳ ನಿರ್ಣಯ, ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ನಡೆಯಲಿದೆ.
ಅಪರಾಹ್ನ 2 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಫೆ.19ರಂದು ಸಂಜೆ ಗಂಟೆ 6.00ರಿಂದ ಭಕ್ತಿ ಸಂಗೀತ
ಕಾರ್ಯಕ್ರಮ-
ಪುತ್ತೂರಿನ ಸ್ವರ ಮಾಧುರ್ಯ
ಸಂಗೀತ ಬಳಗದ
ಸೋನಿಕಾ ಜನಾರ್ಧನ್
ಮತ್ತು ತಂಡದವರಿಂದ, ಸಂಜೆ ಗಂಟೆ 7ರಿಂದ ವಿಠಲ ನಾಯಕ್ ಮತ್ತು ತಂಡದವರಿಂದ ವಿನೂತನ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ,
ರಾತ್ರಿ ಗಂಟೆ 9.00 ರಿಂದ
ಶ್ರೀಮತಿ ಇಂದುಮತಿ ನಾಗೇಶ್ ನಿರ್ದೇಶನದಲ್ಲಿ
ನಟರಾಜ ನೃತ್ಯನಿಕೇತನ ಕಲ್ಲುಗುಂಡಿ ಇಲ್ಲಿನ ಶಿಷ್ಯವೃಂದದವರಿಂದ
ಭರತ ನೃತ್ಯ ವೈಭವ ನಡೆಯಲಿದೆ.










