ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ

0

ಪುನ: ನಾಗಪ್ರತಿಷ್ಟಾ ಕಾರ್ಯಕ್ರಮ,ಆಶ್ಲೇಷ ಬಲಿ ಮಹಾಪೂಜೆ

ಇಂದು ರಾತ್ರಿ ಶ್ರೀ ದೇವರ ಪೇಟೆ ಸವಾರಿ, ಸಿಡಿಮದ್ದು ಪ್ರದರ್ಶನ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಭಕ್ತಿ,ಸಂಭ್ರಮದಿಂದ ನಡೆಯುತ್ತಿದ್ದು ಫೆ.15 ರಂದು ಬೆಳಿಗ್ಗೆ ಗಣಪತಿ ಹವನ ಉಷಾ ಪೂಜೆ,ನವಕ ಕಲಶಾಭಿಷೇಕ,ಮಹಾಪೂಜೆ ನಡೆಯಿತು‌.


ಬೆಳಿಗ್ಗೆ ಗಣಪತಿ ಹವನ,ನಾಗಪ್ರತಿಷ್ಟಾ ಕಾರ್ಯಕ್ರಮ ನಡೆಯಿತು‌.


ಬಳಿಕ ಆಶ್ಲೇಷ ಬಲಿ ,ಮಹಾಪೂಜೆ ನಡೆಯಿತು.
ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಇಂದು ಸಂಜೆ ಶ್ರೀ ಭೂತಬಲಿ,ಸೇವೆ ಸುತ್ತು, ಶ್ರೀ ದೇವರ ಪೇಟೆ ಸವಾರಿ ,ಸಿಡಿಮದ್ದು ಪ್ರದರ್ಶನ ನಡೆಯಲಿದೆ‌.
ಬಳಿಕ ಶಯನ,ಕವಾಟಬಂಧನ ನಡೆಯಲಿದೆ.