ಗುತ್ತಿಗಾರು ಪ್ರಾ.ಕೃ.ಸ.ಸಂಘದ ಚುನಾವಣೆ

0

ಇಂದು ಪ್ರವೀಣ್, ಸನತ್, ಕೇಶವ, ದಿನೇಶ್ ಸೇರಿದಂತೆ 17 ಸದಸ್ಯರಿಂದ ನಾಮಪತ್ರ

ಗುತ್ತಿಗಾರು ಪ್ರಾ.ಕೃ.ಸ.ಸಂಘದ 12 ನಿರ್ದೇಶಕರ ನೂತನ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದ್ದು ಫೆ.23 ರಂದು ಮತದಾನ ನಡೆಯಲಿದೆ.

ಇಂದು ಫೆ.15 ರಂದು 17 ಜನ ನಾಮಪತ್ರ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ರೈತ ಸಹಕಾರ ಭಾರತ ಹೆಸರಿನಡಿಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಪ್ರವೀಣ್ ಮುಂಡೋಡಿ, ಸನತ್ ಮುಳುಗಾಡು, , ಸುಧಾಕರ ಮಲ್ಕಜೆ, ಜಯಾನಂದ ಪಟ್ಟೆ, ಮಹೇಶ್ ಮುತ್ಲಾಜೆ, ಕೇಶವ ಹೊಸೋಳಿಕೆ, ಗಿರೀಶ್ ಪಂಡಬೈಲು, ದಿನೇಶ್ ಹಾಲೆಮಜಲು ನಾಮಪತ್ರ ಸಲ್ಲಿಸಿದ್ದಾರೆ. ಮಹಿಳಾ ಸ್ಥಾನದಿಂದ ಶಶಿಕಲಾ ದೇರಪಜ್ಜನ ಮನೆ, ರತ್ನಾವತಿ ಹುಲ್ಲುಕುಮೇರಿ, ಹಿಂದುಳಿದ ವರ್ಗ ಬಿ ಯಿಂದ ಮಧುಕಿರಣ ಪೂಜಾರಿಕೋಡಿ, ಹಿಂದುಳಿದ ವರ್ಗ ಎ ಯಿಂದ ಕರುಣಾಕರ ಹೊಸಹಳ್ಳಿ, ಪರಿಶಿಷ್ಟ ಪಂಗಡದಿಂದ ಪುರುಷೋತ್ತಮ ಅಡ್ಡನಪಾರೆ, ಅಭಿಜಿತ್ ಕೆಂಬಾರೆ, ಪರಿಶಿಷ್ಟ ಜಾತಿಯಿಂದ ಬಾಲಪ್ಪ ಬಳ್ಳಕ್ಕ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರರಾಗಿ ಗ್ರಾಮ ಭಾರತ ತಂಡದಿಂದ ಮಹಿಳಾ ಕ್ಷೇತ್ರಕ್ಕೆ ಲತಾಕುಮಾರಿ ಆಜಡ್ಕ ನಾಮಪತ್ರ ಸಲ್ಲಿಸುದ್ದಾರೆ. ಕೇಶವ ಗೌಡ ಚಿಲ್ತಡ್ಕ ಅವರು ಸಾಮಾನ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.