
ನೆಟ್ಟಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಶ್ಯಾನುಭೋಗ್ ಮತ್ತು ಉಪಾಧ್ಯಕ್ಷರಾಗಿ ಲೋಕೇಶ್ ಪೂಜಾರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜ.18 ರಂದು ನಿರ್ದೇಶಕರ ಆಯ್ಕೆ ನಡೆದಿದ್ದು ಹನ್ನೊಂದು ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣಾಧಿಕಾರಿ ಶಿವಲಿಂಗಯ್ಯರವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.















ಈ ಸಂದರ್ಭದಲ್ಲಿ ನಿರ್ದೇಶಕರಾದ ವಸಂತ ನೆಟ್ಟಾರು,ವಿ.ಕಿರಣ್ ಶೆಟ್ಟಿ ವೈಪಾಲ,ಶ್ರೀಧರ ನುರ್ಗೆತ್ತಡಿ,ವಸಂತ ಎನ್, ಎಂ.ಲಕ್ಷ್ಮೀನಾರಾಯಣ ಶ್ಯಾನುಭೋಗ್, ಲೋಕೇಶ ಪೂಜಾರಿ ನೆಟ್ಟಾರು,ಯತೀಶ್ ರೈ ದೇವರಗುಂಡಿ, ಶಾರದಾ ಕೋಡಿಯಡ್ಕ,ಉಮಾದೇವಿ ಶಾಂತಿಮೂಲೆ,ಕುಶಾಲಪ್ಪ ಕೋಡಿ,ಭಾಸ್ಕರ ನೆಟ್ಟಾರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಸಹಕರಿಸಿದರು










