ಆಲಾಜೆ ಪಂಡಿತ್ ಗಣಪಯ್ಯ ಕೆ.ವಿ. ಯವರ ಶ್ರದ್ದಾಂಜಲಿ ಮತ್ತು ವೈಕುಂಠ ಸಮಾರಾಧನೆ

0

ಇತೀಚೆಗೆ ನಿಧನ ಹೊಂದಿದ ನಿವೃತ ಹೈಸ್ಕೂಲ್ ಮುಖ್ಯ ಶಿಕ್ಷಕ ಯಕ್ಷಗಾನ ಕಲಾವಿದ, ಹರಿಕತಥೇ ಅರ್ಥದಾರಿಯಾಗಿ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ದ ಟ್ರಸ್ಟ್ ನ ಹಿರಿಯ ಸದಸ್ಯರಾಗಿಯೂ ಜನಾನೂರಾಗಿದ್ದ ಪಂಡಿತ್ ಗಣಪಯ್ಯ ಕೆ, ವಿಯವರ ಶ್ರದ್ಧಾಂಜಲಿ ಸಭೆ ಮತ್ತುವೈಕುಂಠ ಸಮಾರಾಧನೆ, ಅವರ ಆಲಾಜೆ ಮನೆಯಲ್ಲಿ ನಡೆಯಿತು.

ದೇವರಕಾನ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಪಿ, ರಾಮಚಂದ್ರ ಭಟ್ ದೇವಸ್ಯ, ನ್ಯಾಯವಾದಿ ಜಗದೀಶ್ ಹುದೇರಿ, ನಿವೃತ್ತ ಉಪನ್ಯಾಸಕ ಕಳತಜೆ ಜಯರಾಜಾ ಆಚಾರ್ಯ, ಉದಯ ವೆಂಕಟೇಶ್, ನುಡಿನಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.

ಈ ಸಂದರ್ಭದಲ್ಲಿ ಅವರ ಪತ್ನಿ ಸರಸ್ವತಿ ಗಣಪಯ್ಯ ಭಟ್, ನಾಗರಾಜ್ ರಾವ್ ಆಲಾಜೆ, ಶ್ರೀ ಹರಿ ಭಟ್ ಶೇರ, ವೆಂಕಟರಾಮ ಕೆ, ಕುಟುಂಬಸ್ಥರು, ಹಿತೈಸಿ ಗಳು ಉಪಸ್ಥಿತರಿದ್ದರು.