
ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮುಂದಿನ ಮಾರ್ಚ್ ತಿಂಗಳ 15 ರಿಂದ 18 ರ ತನಕ ನಡೆಯಲಿರುವ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವದ ಪೂರ್ವ ಭಾವಿಯಾಗಿ (ಕೂವಂ ಅಳಕ್ಕಲ್) ಭತ್ತ ಅಳೆಯುವ ಹಾಗೂ ವೀಳ್ಯ ಕೊಡುವ ಕಾರ್ಯಕ್ರಮ ಫೆ.20 ರಂದು ನಡೆಯಿತು.















ದೈವಸ್ಥಾನದಲ್ಲಿ ಬೆಳಗ್ಗೆ ದೈವದ ದರ್ಶನ ಪಾತ್ರಿಯವರಿಂದ ಸಾಮೂಹಿಕ ಪ್ರಾರ್ಥನೆಯು ನೆರವೇರಿತು.
ಬಳಿಕ ಶ್ರೀ ದೈವದ ದರ್ಶನ ಪಾತ್ರಿಯವರ ನೇತೃತ್ವದಲ್ಲಿ ದರ್ಶನ ಸೇವೆಯು ನಡೆದು ಶುಭ ಮುಹೂರ್ತದಲ್ಲಿ (ಕೂವಂ ಅಳಕ್ಕಲ್) ಭತ್ತ ಅಳೆಯುವ ಕಾರ್ಯವನ್ನು ಪೂರ್ವಸಂಪ್ರದಾಯದಂತೆ ನೆರವೇರಿಸಲಾಯಿತು.

ಮಹೋತ್ಸವದ ಅಂಗವಾಗಿ
ಕುಂಡಂಕೋಯಿ ಪಂಚಲಿಂಗೇಶ್ವರ ದೇವಸ್ಥಾನ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ, ಆಲೆಟ್ಟಿ ಸದಾಶಿವ ದೇವಸ್ಥಾನ, ಕೋಟೆಪಾರೆ ವಯನಾಟ್ ಕುಲವನ್ ದೈವಸ್ಥಾನ,ಕುತ್ತಿಕೋಲು ಮಹಾವಿಷ್ಣು ದೈವಸ್ಥಾನ,ಪೆರಾಜೆ ಶಾಸ್ತಾವೇಶ್ವರ ದೇವಸ್ಥಾನ, ನಾಗಪಟ್ಟಣ ಸದಾಶಿವ ದೇವಸ್ಥಾನ, ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನ, ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಭತ್ತವನ್ನು ಅಳೆದುತೆಗೆದಿರಿಸಲಾಯಿತು. ಈ ಸಂದರ್ಭದಲ್ಲಿ ಕುತ್ತಿಕೋಲು ಶ್ರೀ ತಂಬುರಾಟಿ ಭಗವತಿ ಕ್ಷೇತ್ರದ ಸ್ಥಾನಿಕರು, ಕುಟುಂಬದ ಯಜಮಾನ ಕುಂಞಕಣ್ಣ ಎ, ದೈವಂಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಕುತ್ತಿಕೋಲು ಶ್ರೀ ತಂಬುರಾಟ್ಟಿ ಭಗವತಿ ಕ್ಷೇತ್ರದ ಅಧ್ಯಕ್ಷ ಆರ್.ಕುಂಞಿಕಣ್ಣನ್ ಬೇಡಗಂ ಹಾಗೂ ಪದಾಧಿಕಾರಿಗಳು,ಉತ್ತರ ಮಲಬಾರ್ ತೀಯ ಸಮುದಾಯದ ಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ರಾಜನ್ ಪೆರಿಯ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಕೋಶಾಧಿಕಾರಿ ರಧೀಶನ್ ಅರಂಬೂರು, ಮಹೋತ್ಸವ ಸಮಿತಿ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪರೈ,ಕಾರ್ಯಾಧ್ಯಕ್ಷರಾದಎನ್.ಎ.ರಾಮಚಂದ್ರ, ನಾರಾಯಣ ಕೇಕಡ್ಕ, ಕೃಷ್ಣಪ್ಪ ಗೌಡ ಕೆದಂಬಾಡಿ, ಕುಂಞರಾಮನ್ ಶ್ರೀ ಶೈಲಂ, ರಾಧಾಕೃಷ್ಣ ಪರಿವಾರಕಾನ, ಪದ್ಮಯ್ಯ ಪಡ್ಪು, ಗೌರವ ಸಲಹೆಗಾರರಾದ ಕೊರಗಪ್ಪ ಮಾಸ್ತರ್ ಕಣಕ್ಕೂರು, ಜಯಪ್ರಕಾಶ್ ಕುಂಚಡ್ಕ, ಪುರುಷೋತ್ತಮ ಕೋಲ್ಚಾರು, ಶಿವರಾಮ ಗೌಡ ಕಲ್ಲೆಂಬಿ, ವಾಸುದೇವ ಗೌಡ ಕುಡೆಕಲ್ಲು, ಪದ್ಮಯ್ಯ ಗೌಡ ಕುಂಬಳಚೇರಿ, ಶ್ರೀಪತಿ ಭಟ್ ಮಜಿಗುಂಡಿ, ಗಣಪತಿ ಭಟ್ ಮಜಿಗುಂಡಿ ಹಾಗೂ ಸಮಿತಿಯ ಪದಾಧಿಕಾರಿಗಳು, ಉಪ ಸಮಿತಿಯ ಸಂಚಾಲಕರು ಮತ್ತು ಸದಸ್ಯರು, ಉಪಸ್ಥಿತರಿದ್ದರು.

ಆಗಮಿಸಿದ ಎಲ್ಲರಿಗೂ ದರ್ಶನ ಪಾತ್ರಿಯವರಿಂದ ಅರಶಿನ ಪ್ರಸಾದ ವಿತರಣೆಯಾಗಿ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.










