ಮೂಗು ಮುಚ್ಚಿ ನಡೆದಾಡುವ ಪರಿಸ್ಥಿತಿ ನಿರ್ಮಾಣ

ಸುಳ್ಯದ ಬೂಡು ವಾರ್ಡಿನ ಓಲಸಿರಿ ಮಜಲು ಎಂಬಲ್ಲಿ ರಸ್ತೆಯ ಬದಿಯ ಚರಂಡಿಯಲ್ಲಿ ಪರಿಸರದ ಕೊಳಚೆ ನೀರು ಹರಿಯುತ್ತಿದ್ದು ಪರಿಸರ ದುರ್ವಾಸನೆ ಯಿಂದ ಕೂಡಿರುತ್ತದೆ.
ಚರಂಡಿಯ ಮೇಲ್ಭಾಗದಲ್ಲಿ ಯಾವುದೇ ಸ್ಲಾಬ್ಗಳು ಇಲ್ಲದೇ ಇದ್ದು ಸಂಜೆ ವೇಳೆ ಈ ಭಾಗದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ.
















ಈ ಬಗ್ಗೆ ಸಂಬಂಧಪಟ್ಟವರು ಯಾರು ಇತ್ತ ಗಮನಹರಿಸುವುದಿಲ್ಲ ಎಂದು ಸ್ಥಳೀಯರ ಆಕ್ರೋಶವಾಗಿದ್ದು ಸಂಬಂಧಪಟ್ಟ ಜನಪ್ರತಿನಿಧಿಗಳು ಅಥವಾ ಇಲಾಖೆಯವರು ಈ ಬಗ್ಗೆ ಗಮನ ಹರಿಸಬೇಕೆಂದು ಈ ಭಾಗದ ನಿವಾಸಿಗಳ ಆಗ್ರಹವಾಗಿದೆ. ಅಲ್ಲದೆ ಈ ಕೊಳಚೆ ನೀರು ಮುಂದೆ ಸಾಗಿ ಪಯಶ್ವಿನಿ ನದಿಗೆ ಸೇರುತ್ತಿದ್ದು ಇದರ ಮೂಲ ಸ್ಥಳವನ್ನು ಹುಡುಕಿ ಚರಂಡಿಗೆ ಕೊಳಚೆ ನೀರು ಬಿಡದಂತೆ ಕ್ರಮ ಕೈ ಗೊಳ್ಳ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.










