














ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಸಿರಿಬಾಗಿಲು – ಮಣಿಭಾಂಡ ಇದರ
ಮುಖ್ಯೋಪಾಧ್ಯಾಯರಾದ
ಎನ್.ವಿಜಯಕುಮಾರ್ ನಡುತೋಟ ಸುದೀರ್ಘ 30 ವರ್ಷಗಳ ಸೇವೆಯ ಬಳಿಕ ಫೆ.28 ರಂದು ನಿವೃತ್ತರಾದರು. ಇವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನಡುತೋಟ ದಿ. ತಿಮ್ಮಪ್ಪ ಗೌಡ ಮತ್ತು ದಿ.ಶ್ರೀಮತಿ ರಾಮಕ್ಕ ದಂಪತಿ ಗಳ ಪುತ್ರ.
1965 ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬಿಳಿನೆಲೆ ಕೈಕಂಬ ಶಾಲೆ ಮತ್ತು ಸುಬ್ರಹ್ಮಣ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು, ಪ್ರೌಢ ಶಿಕ್ಷಣವನ್ನು ಸುಬ್ರಹ್ಮಣ್ಯ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿದರು.ನಂತರ ಮಂಗಳೂರು ಸರಕಾರಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ತರಬೇತಿ ಪಡೆದು 1994 ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಮುಂಡೂರು ಪಳಿಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ತನ್ನ ವೃತ್ತಿ ಜೀವನ ಆರಂಭಿಸಿದರು..
1998 ರಲ್ಲಿ ವರ್ಗಾವಣೆ ಹೊಂದಿ ಸಿರಿಬಾಗಿಲು ಶಾಲೆ ಯಲ್ಲಿ ಸುದೀರ್ಘ 27 ವರ್ಷಗಳ ಸೇವೆ ಸಲ್ಲಿಸಿದವರು.
ಸುಬ್ರಹ್ಮಣ್ಯ ಜೇಸೀಸ್ ನ ಸದಸ್ಯರಾಗಿ, ಬಿಳಿನೆಲೆ ಕೈಕಂಬ ಯುವಕ ಮಂಡಲದ ಅಧ್ಯಕ್ಷರಾಗಿ, ಅಧ್ಯಾಪಕರ ತಾಲೂಕು ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿ, ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಬಸವೇಶ್ವರ ದೇವಾಲಯದ ಆಡಳಿತ ಮಂಡಳಿ ಸದಸ್ಯರಾಗಿ, ಅಧ್ಯಾಪಕರ ಸಹಕಾರ ಸಂಘದ ನಿರ್ದೇಶಕರಾಗಿ, ಶಿರಾಡಿ ದೈವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿಯಾಗಿ, ಬಿಳಿನೆಲೆ ಕೈಕಂಬ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಬಹುಮುಖ ವ್ಯಕ್ತಿತ್ವ ಇವರದು.. ಪತ್ನಿ ಅಧ್ಯಾಪಕಿ ಶ್ರೀಮತಿ ಗೀತಾ, ಮಗಳು ಕು.ಸನ್ನಿಧಿ.










