ಮರ್ಕಂಜ : ಕಾವೂರು ದೇವಸ್ಥಾನದ ಜಾತ್ರೋತ್ಸವ ಸಮಿತಿ ರಚನೆ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಾಸ್ಥಾನಪನೆಗಳಲ್ಲಿ ಒಂದಾದ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವವು ಏಪ್ರಿಲ್ 1ರಿಂದ ಆರಂಭ ಗೊಳ್ಳಲಿದ್ದು, ಆ ಪ್ರಯುಕ್ತ ಜಾತ್ರೋತ್ಸವ ಸಮಿತಿ ರಚನೆಯು ಮಾ. 2ರಂದು ದೇವಾಲಯದಲ್ಲಿ ನಡೆಯಿತು.

ಜಾತ್ರೋತ್ಸವ ಸಮಿತಿ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಅಚ್ಚುತ ಪಿ. ಆಯ್ಕೆ ಯಾದರು. ಉಪಾಧ್ಯಕ್ಷರಾಗಿ ಗಿರೀಶ್ ನಾರ್ಕೋಡು, ಹರೀಶ್ ಕಾಯರ, ಗಂಗಾಧರ ಪಾರೆಮಜಲು, ಬಾಲಕೃಷ್ಣ ಜೋಗಿಮೂಲೆ, ಪುರುಷೋತ್ತಮ ಗೌಡ ಕಾಯರ, ಧರ್ಮಪಾಲ ಗೌಡ ಸುಳ್ಳಿ, ಜಗದೀಶ ಬಲ್ಕಾಡಿ, ದಿನೇಶ್ ನಾರ್ಕೋಡು, ಧನಂಜಯ ಗೌಡ ಪಿಂಡಿಮನೆ, ಪುಷ್ಪರಾಜ್ ಪಾರೆಪ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಡಿಲ್ಲಿ ಕುಮಾರ ಕಾಯರ, ಕಾರ್ಯದರ್ಶಿಯಾಗಿ ಗಿರೀಶ್ ಕಾಯರ, ಖಜಾಂಜಿಯಾಗಿ ಮೋಹಿತ್ ಹರ್ಲಡ್ಕ, ಸದಸ್ಯರಾಗಿ ವೀರಪ್ಪ ಗೌಡ ಮಿನುಂಗೂರು, ಲಕ್ಷ್ಮೀಶ ಬಳ್ಳಕ್ಕ, ಚರಣ್ ಕುಮಾರ್ ಗುತ್ತುಗದ್ದೆ, ಆನಂದ ಕುಧ್ಪಾಜೆ, ಹರ್ಷಿತ್ ಗುತ್ತುಗದ್ದೆ, ಗಣೇಶ್ ಗಟ್ಟಿಗಾರು, ಬಾಲಕೃಷ್ಣ ಕಂಜಿಪಿಲಿ, ಸೋಮಪ್ರಸಾದ್ ಗುಡಾಂಬೆ, ವಾಸುದೇವ ಆಚಾರ್ಯ ತೇರ್ಥಮಜಲು, ಪುರುಷೋತ್ತಮ ಚಿತ್ತಡ್ಕ, ಹೇಮಕುಮಾರ ನಾರ್ಕೋಡು ಆಯ್ಕೆಯಾದರು.

ಈ ಸಂದರ್ಭದಲ್ಲಿ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗನ್ನಾಥ್ ಕಾಯರ, ನಿಕಟ ಪೂರ್ವಾಧ್ಯಕ್ಷರಾದ ರಾಘವ ಗೌಡ ಕಂಜಿಪಿಲಿ, ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸೇವಾ ಸಮಿತಿಯ ಅಧ್ಯಕ್ಷರಾದ ರಾಮಚಂದ್ರ ಹಲ್ದಡ್ಕ, ಭಜನಾ ಮಂಡಳಿ ಅಧ್ಯಕ್ಷ ಯತೀಶ್ ಕಂಜಿಪಿಲಿ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಾಲಯದ ವಿವಿಧ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.