ಪಂಜ : ಯುವಕ-ಯುವತಿ ಮಂಡಲದ ಅಭಿವೃದ್ಧಿ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ ಮಂಜೂರಾತಿ ಪತ್ರ ವಿತರಣೆ

0

ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವಕ ಮಂಡಲ ದ ಅಭಿವೃದ್ಧಿ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ಮಂಜೂರಾದ ರೂ1,00,000 ಮೊತ್ತದ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್,ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ರವರು ಯುವಕ ಮಂಡಲದ ಅಧ್ಯಕ್ಷ ವಿದ್ಯಾನಂದ ರಿಗೆ ವಿತರಣೆ ಮಾಡಿದರು.ಈ ಸಂದರ್ಭಯುವಕ ಮಂಡಲದ ಕಾರ್ಯದರ್ಶಿ ಗಣೇಶ್ ಕೆ, ಉಪಾಧ್ಯಕ್ಷರು ಶರತ್ ಕೋಡಿ,ಶ್ರೀ ಉಳ್ಳಾಲ್ತಿ ದೈವಸ್ಥಾನದ ಪರಿಚಾಲಕರು , ಪದಾಧಿಕಾರಿಗಳು, ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.ಪಂಜ ವಲಯ ಮೇಲ್ವಿಚಾರಕರು ,ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.