ಕಾರಿನಲ್ಲಿದ್ದವರಿಗೆ ಆಪತ್ಭಾಂಧವರಾದ ಸುಳ್ಯದ ಯುವಕರು
ಸಂಪಾಜೆ ಸಮೀಪ ಮಾ 10 ರಂದು ತಡ ರಾತ್ರಿ ಸುಮಾರು 1.45 ಗಂಟೆ ಸಮಯಕ್ಕೆ ಸೆಂಟ್ರೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮೋರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.















ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತಿದ್ದ ಕಾರು ಮೂಲತಃ ಮಂಡ್ಯ ಮೂಲದವರಾಗಿದ್ದು ಚಾಲಕ ಅರುಣ್ ಸೇರಿದಂತೆ ಕಾರಿನಲ್ಲಿ ಅವರ ಪತ್ನಿ ಹೇಮಾವತಿ, ಮಗ ಲಿಖಿತ್ ಮಗಳು ಲಾಸ್ಯ,ಎಂಬುವವರು ಇದ್ದರು ಇಂದು ತಿಳಿದು ಬಂದಿದೆ.
ಘಟನೆಯಿಂದ ಹೇಮಾವತಿ ಹಾಗೂ ಮಗ ಲಿಖಿತ್ ಗೆ ಗಾಯಾಗಳಾಗಿದ್ದು ಕಾರಿನ ಮುಂಭಾಗ ಪೂರ್ಣ ಜಖಂ ಗೊಂಡಿದೆ. ಅಪಘಾತ ಸಂಭವಿಸಿ ಮಧ್ಯ ರಾತ್ರಿ ಯಾರು ಇಲ್ಲದೆ ಆತಂಕದಲ್ಲಿದ್ದ ಸಮಯದಲ್ಲಿ ಸುಳ್ಯದ ಯುವಕರು ಆಪತ್ಭಾಂದವರಾಗಿ ಸಹಕರಿಸಿದ್ದಾರೆ.ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಸುಳ್ಯ ಪರಿಸರದ ನಾಸಿರ್ ಬಾರ್ಪಣೆ,ಸಾದಿಕ್ ಹಾಗೂ ಗೆಳೆಯರು, ಅಪಘಾತದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ತಮ್ಮ ಕಾರಿನ ಮೂಲಕ ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.










