ಸಂಪಾಜೆ ಜೂನಿಯರ್ ಕಾಲೇಜಿನ ನಿವೃತ್ತ ಉಪನ್ಯಾಸಕ ಟಿ. ಕೆ. ಗೋಪಾಲಕೃಷ್ಣ ಭಟ್ ನಿಧನ

0

ಮಾಣಿ ಸಮೀಪದ ನೆರಳಕಟ್ಟೆಯಲ್ಲಿ ವಾಸಿಸುತ್ತಿರುವ ಸಂಪಾಜೆ ಜೂನಿಯರ್ ಕಾಲೇಜಿನ ನಿವೃತ್ತ ಉಪನ್ಯಾಸಕ ಟಿ. ಕೆ ಗೋಪಾಲಕೃಷ್ಣ ಭಟ್ ಅವರು ಅಸೌಖ್ಯದಿಂದ ಬಳಲುತ್ತಿದ್ದು ಮಾ. 10ರಂದು ನೆರಳ ಕಟ್ಟೆ ಮನೆಯಲ್ಲಿ ನಿಧನರಾದರು.

ಇವರು ಸಂಪಾಜೆ ಜೂನಿಯರ್ ಕಾಲೇಜಿನಲ್ಲಿ ಪ್ರೌಢ ಶಾಲೆಯಲ್ಲಿ ಗಣಿತ ಮಾಸ್ತರ್ ಆಗಿ ನಂತರ ಪದೋನ್ನತಿ ಹೊಂದಿ ಜೂನಿಯರ್ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದರು.

ಇವರಿಗೆ 68ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ವಿಜಯಲಕ್ಷ್ಮೀ, ಪುತ್ರಿಯರಾದ ಸಹನಾ, ರಚನಾ ಅಳಿಯ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.