ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಫಾರಿಗೆ ಡಾ. ಕೆ.ವಿ ಚಿದಾನಂದರಿಂದ ಸನ್ಮಾನ

0

ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೆ.ಎಂ. ಮುಸ್ತಫಾರಿಗೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ವತಿಯಿಂದ ಮಾ. 17 ರಂದು ಸನ್ಮಾನಿಸಲಾಯಿತು. ಎ.ಒ.ಎಲ್.ಇ ಅಧ್ಯಕ್ಷ ಡಾ. ಕೆ.ವಿ ಚಿದಾನಂದ ಮತ್ತು ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿಯವರು ಮುಸ್ತಫಾರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ
ನೆಹರೂ ಮೆಮೋರಿಯಲ್ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ ಡಾ. ಲಕ್ಷ್ಮೀಶ ಕೆ.ಎಸ್, ಡಾ. ಕವಿತಾ ಬಿ.ಎಂ, ಡಾ. ಹರ್ಷವರ್ಧನ್ ಕೆ, ಡಾ. ಭಾಗ್ಯೆಶ್, ರಿಯಾಜ್ ಕಟ್ಟೆಕಾರ್, ಪಿ.ಎ ಮೊಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.


ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ ಲೀಲಾದರ್ ಡಿ.ವಿ ಸ್ವಾಗತಿಸಿ, ಕೆವಿಜಿ ಆಯುರ್ವೇದ ಫಾರ್ಮ ಮತ್ತು ರಿಸರ್ಚ್ ಸೆಂಟರ್ ನ ಆಡಳಿತಾಧಿಕಾರಿ
ಡಾ. ಪುರುಷೋತ್ತಮ್ ಕೆ.ಜಿ ವಂದಿಸಿದರು.