
ಪಂಜ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಪ್ರಾಂತೀಯ ಮಟ್ಟದ ಕ್ಲಬ್ ಕ್ವಾಲಿಟಿ ಇನಿಷಿಯೇಟಿವ್ ತರಬೇತಿ ಕಾರ್ಯಗಾರ CQI ಮತ್ತು ಸದಸ್ಯತ್ವ ಅಭಿವೃದ್ಧಿ ಕಾರ್ಯಗಾರ ಮಾ. 19ರಂದು ಪಂಜ ಲಯನ್ಸ್ ಭವನದಲ್ಲಿ ಕ್ಲಬ್‌ನ ಅಧ್ಯಕ್ಷ ಲ. ಶಶಿಧರ ಪಳಂಗಾಯರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಾಂತ್ಯ 5ರ ಪ್ರಾಂತೀಯ ಅಧ್ಯಕ್ಷ ಲ. ಗಂಗಾಧರ ರೈ ದೀಪ ಬೆಳಗಿಸಿ ಕಾರ್ಯಗಾರ ಉದ್ಘಾಟಿಸಿದರು. ಲಯನ್ಸ್ ಜಿಲ್ಲಾ CQI ಪ್ರಧಾನ ಸಂಯೋಜಕಿ ಲ. ಸೌಜನ್ಯ ಹೆಗ್ಡೆ ಮತ್ತು ಲಯನ್ಸ್ ಜಿಲ್ಲಾ GMT ಪ್ರಧಾನ ಸಂಯೋಜಕರಾದ ಲ. ತುಲಾರ್ ರೈ ಕಾರ್ಯಗಾರ ನಡೆಸಿಕೊಟ್ಟರು. ವಲಯ 2 ರ ವಲಯಾಧ್ಯಕ್ಷ ಲ. ರಂಗಯ್ಯ ಶೆಟ್ಟಿಗಾರ್, ವಲಯ 1ರ ವಲಯಾಧ್ಯಕ್ಷೆ ಲ. ರೂಪ ಜೆ. ರೈ, ಪಂಜ ಲಯನ್ಸ್ ಕ್ಲಬ್‌ನ ಕೋಶಾಧಿಕಾರಿ ಲ. ಸುರೇಶ್ ನಡ್ಕ, ಕಾರ್ಯದರ್ಶಿ ಲ. ಮೋಹನ್ ದಾಸ್ ಕೂಟಾಜೆ, ಝೋನ್ ಎನ್ವೈ ಲ. ದಿನೇಶ್ ಆಚಾರ್ಯ ವೇದಿಕೆಯಲ್ಲಿ
ಉಪಸ್ಥಿತರಿದ್ದರು.















ಪಂಜ ಲಯನ್ಸ್ ಕ್ಲಬ್‌ನ ಫಸ್ಟ್ ವೈಸ್ ಪ್ರೆಸಿಡೆಂಟ್ ನಾಗೇಶ್ ಅತಿಥಿಗಳನ್ನು ವೇದಿಕೆಗೆ ಬರಮಾಡಿಕೊಂಡರು. ಲ. ರಶ್ಮೀ ಪಳಂಗಾಯ ಪ್ರಾರ್ಥಿಸಿದರು. ಲ. ಆನಂದ ಜಳಕದಹೊಳೆ ಧ್ವಜವಂದನೆ ಸಲ್ಲಿಸಿದರು. ಕಾರ್ಯಕ್ರಮ ಸಂಯೋಜಕರಾದ ಲ. ರಾಜೇಶ್ ರೈ ಸ್ವಾಗತಿಸಿದರು. ಲ. ಪುರಂದರ ಕನ್ಯಾಡಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಲ. ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.










