ರೋಟರಿ ಕ್ಲಬ್ ಸುಳ್ಯ ಸಿಟಿಗೆ ಜಿಲ್ಲಾ ಗವರ್ನರ್ ರೊ.ವಿಕ್ರಮ್ ದತ್ತ ಅಧಿಕೃತ ಭೇಟಿ‌ ಕಾರ್ಯಕ್ರಮ

0

ಕವಿ ಸುಬ್ರಾಯ ಚೊಕ್ಕಾಡಿ ಯವರಿಗೆ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿ ಪ್ರಧಾನ- ಡಾ.ಲೀಲಾಧರ್ ಡಿ.ವಿ ಯವರಿಗೆ ಸನ್ಮಾನ

ರೋಟರಿ ಕ್ಲಬ್ ಸುಳ್ಯ ಸಿಟಿಗೆ ಜಿಲ್ಲಾ ಗವರ್ನರ್‌ ಅಧಿಕೃತ ಭೇಟಿ ಕಾರ್ಯಕ್ರಮ ಹಾಗೂ ಚಾರ್ಟರ್ ನೈಟ್ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭ ರೋಟರಿ ಕಮ್ಯುನಿಟಿ ಸಭಾಭವನದಲ್ಲಿ ಎ.3 ರಂದು ನಡೆಯಿತು.

ಕ್ಲಬ್ ನ ವತಿಯಿಂದ ಗೂನಡ್ಕದಲ್ಲಿ ಬಸ್ಸು ‌ನಿಲ್ದಾಣ, ಸುಳ್ಯ ಪೋಲಿಸ್ ಠಾಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ರೋಟರಿ ಶಾಲೆಗೆ ಸ್ಯಾನಿಟರಿ ಬರ್ನಿಂಗ್ ಮೆಷಿನ್,ಶ್ರೀರಾಂಪೇಟೆಯಲ್ಲಿ ಪೋಲಿಸ್ ಚೌಕಿ ನಾಲ್ಕು ಯೋಜನೆಗಳನ್ನು ಜಿಲ್ಲಾಗವರ್ನರ್ ಉದ್ಘಾಟಿಸಿಲೋಕಾರ್ಪಣೆಗೊಳಿಸಿದರು.

ಸಂಜೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ಅಧ್ಯಕ್ಷ ರೊ.ಶಿವಪ್ರಸಾದ್ ಕೆ.ವಿ ವಹಿಸಿದ್ದರು.
3181 ವಲಯದ ಜಿಲ್ಲಾ ಗವರ್ನರ್ ರೊ.ಎಂ.ಪಿ.ಹೆಚ್.ಎಘ್ ವಿಕ್ರಮ್ ದತ್ತ, ಅಸಿಸ್ಟೆಂಟ್ ಗವರ್ನರ್ ಹರ್ಷಕುಮಾರ್ ರೈ, ಝೋನಲ್ ಲೆಪ್ಟಿನೆಂಟ್ ರೊ.ಮುರಳೀಧರ ರೈ, ಜಿ.ಎಸ್.ಆರ್ ರೊ.ಡಾ.ಕೇಶವ ಪಿ.ಕೆ, ನಿಕಟ ಪೂರ್ವ ಅಧ್ಯಕ್ಷ ರೊ.ಗಿರೀಶ್ ನಾರ್ಕೋಡು, ಕಾರ್ಯದರ್ಶಿ ರೊ.ನವೀನ್ ಅಳಿಕೆ, 2025-26 ರ ಅಧ್ಯಕ್ಷ ರೊ.ಹೇಮಂತ್ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಯಿಚರಣ್, ಸನತ್ ಚಂದ್ರ ರವರು ಹೊಸ ಸದಸ್ಯರಾಗಿ ಕ್ಲಬ್ಗೆ ಸೇರ್ಪಡೆಗೊಂಡರು. ಕ್ಲಬ್ ವತಿಯಿಂದ ಜೀವಮಾನ ಶ್ರೇಷ್ಠ ಸಾಧಕ ಪ್ರಶಸ್ತಿಯನ್ನು ಹಿರಿಯರಾದ ಖ್ಯಾತ ಸಾಹಿತಿ,ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಪ್ರದಾನಮಾಡಲಾಯಿತು.

ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ರೊ.ಡಾ.ಲೀಲಾಧರ್ ಡಿ.ವಿ ಯವರನ್ನು ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ಯೋಗ ಪಟು ಕು.ಹಾರ್ದಿಕ ಕೆರೆಕ್ಕೋಡಿ ಮತ್ತು ಕರಾಟೆ ಪಟು ವರ್ಷಿತ್ ಎಂ.ಎನ್ ಮಂಡೆಕೋಲು‌ ರವರನ್ನು ಹಾಗೂ ಕ್ಲಬ್ ನ ಪೂರ್ವಾಧ್ಯಕ್ಷರುಗಳನ್ನು ಅಭಿನಂದಿಸಲಾಯಿತು. ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಲ್.ಇ.ಡಿ.ಟಿವಿ ಹಾಗೂ ಮುರುಳ್ಯ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಲಾಯಿತು. ಕ್ಲಬ್‌ನ ಬುಲೆಟಿನ್ “ಯುಕ್ತಿ ” ಅಸಿಸ್ಟೆಂಟ್ ಗವರ್ನರ್ ಬಿಡುಗಡೆಗೊಳಿಸಿದರು.

ಮಾ| ಮೌರ್ಯ ನಾರ್ಕೋಡು ಪ್ರಾರ್ಥಿಸಿದರು. ರೊ.ಶಿವಪ್ರಸಾದ್ ಕೆ.ವಿ ಸ್ವಾಗತಿಸಿದರು. ರೊ.ಪುರಂದರ ರೈ ಗವರ್ನರ್ ಪರಿಚಯ ವಾಚಿಸಿದರು. ಕಾರ್ಯದರ್ಶಿ ರೊ.ನವೀನ್ ಅಳಿಕೆ ವಂದಿಸಿದರು. ರೊ.ಪ್ರೀತಮ್ ಡಿ.ಕೆ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.

ರೋಟರಿ ಕ್ಲಬ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಸದಸ್ಯರು, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಇತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.