ಆಲೆಟ್ಟಿ ರಸ್ತೆಯ ಗುರುಂಪುವಿನಲ್ಲಿ ಹೂತು ಹೋದ ಲಾರಿ- ವಾಹನ ಸಂಚಾರಕ್ಕೆ ಅಡಚಣೆ

0

ಆಲೆಟ್ಟಿ ರಸ್ತೆಯ ಗುರುಂಪುವಿನಲ್ಲಿ ಜೆ.ಜೆ.ಎಂ ಪೈಪು ಲೈನ್ ಗಾಗಿ ನಡೆಸಿದ ಕಾಮಗಾರಿಗಾಗಿ ಅಗೆದು ಮುಚ್ಚಲಾಗಿದ್ದ ಮಣ್ಣಿನ ಲ್ಲಿ ಲಾರಿಯೊಂದು ಹೂತು ಹೋಗಿ ಕೆಲ ಸಮಯ ರಸ್ತೆ ಬ್ಲಾಕ್ ಆದ ಘಟನೆ ಸಂಭವಿಸಿದೆ.

ನಾಗಪಟ್ಟಣದ ಕೆ.ಎಫ್.ಡಿ.ಸಿ ಫ್ಯಾಕ್ಟರಿ ಯಿಂದ ರಬ್ಬರ್ ಹಾಲಿನ ಬ್ಯಾರಲ್ ತುಂಬಿದ್ದ ಲಾರಿ ಮಣ್ಣಿನಲ್ಲಿ ಹೂತು ಹೋಗಿ ಸಿಲುಕಿಕೊಂಡಿತು. ಇದರಿಂದಾಗಿ ಈ ರಸ್ತೆಯ ಮೂಲಕ ಸಂಚರಿಸುತ್ತಿದ್ದ ವಾಹನಗಳಿಗೆ ಅಡಚಣೆಯಾಯಿತು. ಪೈಪು ಲೈನ್ ಕಾಮಗಾರಿ ನಡೆಸಿ ಸಮರ್ಪಕವಾಗಿ ರಸ್ತೆಯನ್ನು ಮತ್ತೆ ನಿರ್ಮಿಸದಿದ್ದುರಿಂದ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.