ಕೊರಂಬಡ್ಕ ದೈವಸ್ಥಾನದಲ್ಲಿ ನೇಮೋತ್ಸವ

0

ಸಾವಿರಾರು ಮಂದಿ ಭಾಗಿ

ಸುಳ್ಯ ಜಯನಗರ – ಕೊರಂಬಡ್ಕ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ, ಗುಳಿಗ ದೈವ, ಸ್ವಾಮಿ ಕೊರಗಜ್ಜ ದೈವಸ್ಥಾನ ಇಲ್ಲಿ ವ್ಯವಸ್ಥಾಪನಾ ಆಡಳಿತ ಕಾರ್ಯ ಸೇವಾ ಸಮಿತಿ ಟ್ರಸ್ಟ್ ಇದರ ನೇತೃತ್ವದಲ್ಲಿ ದೈವಗಳ ಕಾಲಾವಧಿ ನೇಮೋತ್ಸವವು ಎ.೫ ಮತ್ತು ಎ.೬ರಂದು ನಡೆಯಿತು.

ಎ.೫ರಂದು ಬೆಳಗ್ಗೆ ಗಣಪತಿ ಹೋಮ, ಸಂಜೆ ೪ ರಿಂದ ಶ್ರೀ ಗುಳಿಗ ದೈವದ ನೇಮ, ಬಳಿಕ ಪ್ರಸಾದ ವಿತರಣೆ. ಸಂಜೆ ದೀಪಾರಾಧನೆ ನಡೆಯಿತು.
ಬಳಿಕ ಶ್ರೀ ನಾಗಬ್ರಹ್ಮ ದೇವರಿಗೆ ಮಹಾಪೂಜೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ. ಬಳಿಕ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿದು ಸತ್ಯದೇವತೆ ಶ್ರೀ ತನ್ನಿ ಮಾಣಿಗ ದೈವದ ನೇಮ. ರಾತ್ರಿ ಪಾತ್ರಿಗಳ ದರ್ಶನ ನಡೆಯಿತು.



ಎ.೬ರಂದು ಬೆಳಗ್ಗೆ ಪ್ರಸಾದ ವಿತರಣೆ. ಬೆಳಗ್ಗೆ ೬ ರಿಂದ ಕಾರಣಿಕ ದೈವ – ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು.

ತಹಶೀಲ್ದಾರ್ ಮಂಜುಳಾ, ಇ.ಒ. ರಾಜಣ್ಣ, ನ.ಪಂ. ಅಧ್ಯಕ್ಷೆ ಶಶಿಕಲಾ‌ ನೀರಬಿದ್ರೆ ಸಹಿತ ಹಲವು ಮಂದಿ ಗಣ್ಯರು ಸೇರಿ ಸಾವಿರಾರು‌ ಮಂದಿ‌ ಆಗಮಿಸಿ ಪ್ರಸಾದ ಸ್ವೀಕರಿಸಿದರು.

ಆಡಳಿತ ಮಂಡಳಿ ಸಂಚಾಲಕ ಜಿ ಜಗನ್ನಾಥ ಜಯನಗರ, ಅಧ್ಯಕ್ಷ ಕೇಶವ ಮಾಸ್ತರ್ ಹೊಸಗದ್ದೆ, ನೇಮೋತ್ಸವ ಸಮಿತಿ ಅಧ್ಯಕ್ಷ ಸೋಮಶೇಖರ ದೋಳ, ಉಪಾಧ್ಯಕ್ಷ ರಮೇಶ್ ಇರತಾಮಜಲು ಸ್ವಾಗತಿಸಿ ಬರಮಾಡಿಕೊಂಡರು.