
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ) ವತಿಯಿಂದ ಎ. 13 ರಂದು ಕೋಟಿ ಚೆನ್ನಯ ಕ್ರೀಡಾಂಗಣ ಗರಡಿಯ ಮುಂಭಾಗದ ಮೈದಾನ ಪಂಜದಲ್ಲಿ 6 ತಂಡಗಳ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಿತು.

ಸಾಂಕೇತಿಕವಾಗಿ ಉದ್ಘಾಟಣೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಂಜ ಇದರ ನಿವೃತ್ತ ಸಿಬ್ಬಂದಿ ಆನಂದ ಗೌಡ ಜಳಕದಹೊಳೆ ರವರು ನೆರವೇರಿಸಿ ಪಂದ್ಯಾಕೂಟಕ್ಕೆ ಚಾಲನೆಯನ್ನು ನೀಡಿದರು. ಸಂಜೆ . ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಂಜ ಪಂಚಶ್ರೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು ಸಭಾಧ್ಯಕ್ಷತೆ ವಹಿಸಿದ್ದರು, ಬಹುಮಾನ ವಿತರಕರಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಪಾಲ್ಗೊಂಡಿದ್ದರು ., ಅತಿಥಿಗಳಾದ ಪ್ರಗತಿ ಪರ ಕೃಷಿಕರಾದ ಗಂಗಾಧರ ಗೌಡ ಮರಕ್ಕಡ , ಜಿತೇಂದ್ರ ಗೌಡ ಪಂಬೆತ್ತಾಡಿ , ರಾಧಾಕೃಷ್ಣ ಗೌಡ ಪೈಕ ಮಾl ದಿ ಪವರ್ ಪ್ಲಸ್ ಏಲಡ್ಕ ಕಾಣಿಯೂರು, ಯುವ ಜನ ಸಂಯುಕ್ತ ಮಂಡಳಿ ಉಪಾಧ್ಯಕ್ಷ ಪವನ್ ಪಲ್ಲತ್ತಡ್ಕ , ಶ್ರೀ ಜನಾರ್ಧನ ನಾಗತೀರ್ಥ ಪಂದ್ಯಾಕೂಟದ ಸಂಯೋಜಕರು, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕಾರ್ಯದರ್ಶಿ ಶಶಿದಾಸ್ ನಾಗತೀರ್ಥ , ಖಜಾಂಚಿ ನವೀನ್ ನಾಗತೀರ್ಥ , ಕ್ರೀಡಾ ಕಾರ್ಯದರ್ಶಿ ಸತೀಶ್ ಕೆರೆಯಡ್ಕ , 6 ತಂಡಗಳ ಮಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
















ಫಲಿತಾಂಶ : ಪಂದ್ಯಾಕೂಟದ ಪ್ರಥಮ ಸ್ಥಾನವನ್ನು ಶಿವಪ್ರಸಾದ್ ಮತ್ತು ಆಕಾಶ್ ಮಾಲಕತ್ವದ ಹನುಮಾನ್ ಹಂಟರ್ಸ್, ದ್ವಿತೀಯ ಸ್ಥಾನವನ್ನು ಶ್ರೀ ಉಳ್ಳಾಕುಲು ಕಲಾರಂಗ(ರಿ.) ಪಲ್ಲೋಡಿ ಮಾಲಕತ್ವದ ಯು.ಕೆ. ಪಲ್ಲೋಡಿ , ತೃತೀಯ ಸ್ಥಾನವನ್ನು ಅಟಲ್-ಜೀ ಫ್ರೆಂಡ್ಸ್ ಕೂತ್ಕುಂಜ ಮಾಲಕತ್ವದ ಅಟಲ್-ಜೀ ಕ್ರಿಕೆಟರ್ಸ್ ಕೂತ್ಕುಂಜ ಮತ್ತು ಚತುರ್ಥ ಸ್ಥಾನವನ್ನು ಫ್ರೆಂಡ್ಸ್ ಕ್ಲಬ್ ಬಳ್ಪ ಮಾಲಕತ್ವದ ಎಫ್ ಸಿ ಬಳ್ಪ ತಂಡ ಪಡೆದಿರುತ್ತದೆ. ವೈಯಕ್ತಿಕ ಬಹುಮಾನವನ್ನು ಬೆಸ್ಟ್ ಫೀಲ್ಡರ್ ಮಿಥುನ್ ಹೇಮಳ, ಬೆಸ್ಟ್ ಬ್ಯಾಟ್ಸ್‌ಮನ್ ಹೈದೆರ್ ಬೆಳ್ಳಾರೆ, ಬೆಸ್ಟ್ ಬೌಲರ್ ಸವದ್ ಪಂಜಿಕಲ್ಲು, ಎಮರ್ಜಿಂಗ್ ಪ್ಲೇಯರ್ ಆಫ್ ದ ಟೂರ್ನಮೆಂಟ್ ಹಿತೇಶ್ ನಿಂತಿಕಲ್ಲು, ಗೇಮ್ ಚೇಂಜರ್ ಆಫ್ ದಿ ಟೂರ್ನಮೆಂಟ್ ಸತೀಶ್ ಕೆರೆಯಡ್ಕ, ಮ್ಯಾನ್ ಆಫ್ ಮ್ಯಾಚ್ ಫೈನಲ್ ಸವದ್ ಪಂಜಿಕಲ್ಲು, ಬೆಸ್ಟಸ್ ಕೀಪರ್ ಲಿತಿನ್ ಕಂದಡ್ಕ, ಲೆಜೆಂಡ್ ಪ್ಲೇಯರ್ ಯತೀಂದ್ರ ಸುಳ್ಯ, ಹಾಗೂ ಮ್ಯಾನ್ ಆಫ್ ದಿ ಸೀರೀಸ್ ಕಾರ್ತಿಕ್ ಹರಿಹರ ಪಡೆದರು.

ಕಾರ್ಯಕ್ರಮದಲ್ಲಿ ಪ್ರದೀಪ್ ಎಣ್ಮೂರು ನಿರೂಪಿಸಿದರು, ಜನಾರ್ಧನ ನಾಗತೀರ್ಥ ಸ್ವಾಗತಿಸಿದರು ಶಶಿದಾಸ್ ನಾಗತೀರ್ಥ ವಂದಿಸಿದರು.










