ಅಂಬೇಡ್ಕರ್ ಇಲ್ಲದ ದೇಶವನ್ನು ಊಹಿಸಲು ಅಸಾಧ್ಯ : ಪ್ರೊ. ಶಿವಾನಂದ ಜಿ.

ಭಾರತ ದೇಶಕ್ಕೆ ಸಂವಿಧಾನ ನೀಡಿ ದೇಶದ ಸಮಗ್ರ ಜನರ ಏಳಿಗೆಗೆ ಕಾರಣರಾದ ಡಾ. ಭೀಮರಾವ್ ಅಂಬೇಡ್ಕರ್ ಸಮಾಜದ ಎಲ್ಲಾ ವರ್ಗದ ಜನರಿಗೆ ಪೂಜನೀಯರು. ಅವರನ್ನು ಕೆಲವೊಂದು ಸಮಾಜಕ್ಕೆ ಸೀಮಿತಗೊಳಿಸುವುದು ದುರಾದೃಷ್ಟ ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ಅಂಬೇಡ್ಕರ್ ಇಲ್ಲದ ಸಮಾಜವನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿಯ ಇತಿಹಾಸ ವಿಭಾಗದ ಉಪನ್ಯಾಸಕ ಶಿವಾನಂದ ಜಿ ಅವರು ಹೇಳಿದರು.















ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಏ -14 ರಂದು ಕಾಲೇಜಿನ ಸಭಾಂಗಣ ದಲ್ಲಿ ಆಚರಿಸಲಾದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ಇವರು ವಹಿಸಿದ್ದರು. ವೇದಿಕೆಯಲ್ಲಿ ಎನ್ ಎಸ್ ಎಸ್ ಘಟಕಾಧಿಕಾರಿಗಳಾದ ರಾಮಕೃಷ್ಣ, ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಧನರಾಜ್ ಕುಮಾರ್ ಬಿ ಸಿ, ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಗೈದರು. ಪ್ರೊ.ರಾಮಕೃಷ್ಣ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಉಪನ್ಯಾಸಕ ಧನರಾಜ್ ಬಿ ಸಿ ಪ್ರತಿಜ್ಞಾ ವಿಧಿ ಭೋಧಿಸಿದರು, ಅಭಿಜ್ಞಾ ಸ್ವಾಗತಿಸಿ, ಅಮೂಲ್ಯ ವಂದಿಸಿದರು. ಮೋನಿಷಾ ಕಾರ್ಯಕ್ರಮ ನಿರೂಪಿಸಿ ದರು.
ಕಾರ್ಯಕ್ರಮ ಮುಗಿದ ಬಳಿಕ ಕಾಲೇಜಿನಿಂದ ಮುಖ್ಯ ರಸ್ತೆವರೆಗೆ ಜಾಥಾ ನಡೆಸಲಾಯಿತು










