ಪೆರುವಾಜೆಯಲ್ಲಿ ಅದ್ವೈತ್ ಜೆಸಿಬಿ ಗ್ರಾಹಕರ ಸಭೆ

0

ಪ್ರತಿಷ್ಠಿತ ಜೆಸಿಬಿ ಸಂಸ್ಥೆಯ ಡೀಲರ್ ಅದ್ವೈತ್ ಜೆಸಿಬಿಯವರ ಗ್ರಾಹಕರ ಸಭೆಯು ಪೆರುವಾಜೆಯ ಜೆ.ಡಿ. ಆಡಿಟೋರಿಯಂನಲ್ಲಿ ಎ. 16 ರಂದು ಸಂಜೆ ನಡೆಯಿತು.

ಗ್ರಾಹಕರ ಸಭೆಯನ್ನು ಸಹಕಾರಿ ರತ್ನ ಹಾಗೂ ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ಉದ್ಘಾಟಿಸಿದರು.

ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಹಾಗೂ ಪೆರುವಾಜೆ ಶ್ರೀ ಜಲದುರ್ಗ ದೇವಿ ದೇವಸ್ಥಾನದ ಮಾಜಿ ಟ್ರಸ್ಟಿ ಭೋಜರಾಜ್ ಶೆಟ್ಟಿ, ಏರಿಯಾ ಸೇಲ್ಸ್ ಮ್ಯಾನೇಜರ್ ಗುರುಮೂರ್ತಿ, ಅದ್ವೈತ್ ಜೆಸಿಬಿಯ ಸಿ.ಇ.ಓ ರಂಜಿತ್ ರೈ, ಸೇಲ್ಸ್ ಜನರಲ್ ಮ್ಯಾನೇಜರ್ ಅರುಣ್, ಮಾರ್ಕೆಟಿಂಗ್ ಮ್ಯಾನೇಜರ್ ರೋಷನ್, ಬ್ರಾಂಚ್ ಮ್ಯಾನೇಜರ್ಅ ನುಶ್ರೇಯ, ಪಾರ್ಟ್ಸ್ ಮ್ಯಾನೇಜರ್ ಪುರುಷೋತ್ತಮ, ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು.

ಬಿ.ಎಚ್.ಎಲ್ ಸೇಲ್ಸ್ ಮ್ಯಾನೇಜರ್ ಮಹದೇವ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.