ಸುಬ್ರಹ್ಮಣ್ಯ ಕುಲ್ಕುಂದದ ಬಸವೇಶ್ವರ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ ಏ.19 ಹಾಗೂ ಏ.20 ರಂದು ನಡೆಯಲಿದೆ.















ಏ.19 ರ ಬೆಳಗ್ಗೆ ಹಸಿರು ಕಾಣಿಕೆ ಸಮರ್ಪಣೆ ನಡೆಯಲಿದೆ.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ಸಂಜೆ, ಪ್ರಸಾದ ಶುದ್ದಿ, ವಾಸ್ತು ಹೋಮ, ವಾಸ್ತು ಬಲಿ, ಪುಣ್ಯಾಹವಾಚನ ನಡೆಯಲಿದೆ. ರಾತ್ರಿ ಗಂ. 7.00ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ರಾತ್ರಿ ಯಕ್ಷಗಾನ ಬಯಲಾಟ “ದಕ್ಷಯಜ್ಞ – ಗಿರಿಜಾ ಕಲ್ಯಾಣ” ನಡೆಯಲಿದೆ.
ಏ. 20 ರ ಬೆಳಗ್ಗೆ ಗಣಪತಿ ಹವನ, ಕಲಶ ಪೂಜೆ, ಶ್ರೀ ದೇವರಿಗೆ ಬೆಳಗ್ಗಿನ ಮಹಾಪೂಜೆ ಬಳಿಕ ಶತರುದ್ರಾಭಿಷೇಕ ನಡೆಯಲಿದೆ. ಪರಿವಾರ ದೇವರುಗಳಿಗೆ ಕಲಶಾಭಿಷೇಕ, ತಂಬಿಲ ಸೇವೆ ನಡೆಸಿ ಶ್ರೀ ಬಸವೇಶ್ವರ ದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ದೀಪಾರಾಧನೆ, ರಾತ್ರಿ ತಾಯಂಬಕ, ಶ್ರೀ ರಂಗಪೂಜೆ, ಶ್ರೀ ಭೂತ ಬಲಿ, ಪಲ್ಲಕ್ಕಿ ಉತ್ಸವ, ವಸಂತಕಟ್ಟೆಪೂಜೆ, ದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ನಡೆದು, ಮಂತ್ರಾಕ್ಷತೆ , ಅನ್ನ ಸಂತರ್ಪಣೆ ನಡೆಯಲಿದೆ.










