ಬಿದ್ದು ಸಿಕ್ಕಿದ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಗೋಪಾಲ್ ಏನೆಕಲ್

0

ಬಿದ್ದು ಸಿಕ್ಕಿದ ಮೊಬೈಲ್ ಹಿಂದಿರುಗಿಸಿ ಗೋಪಾಲ್ ಏನೆಕಲ್ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.

ಗುತ್ತಿಗಾರು ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಗೋಪಾಲ್ ಏನೆಕಲ್ಲು ಅವರಿಗೆ ಏ.18 ರ ಮಧ್ಯಾಹ್ನ ಸುಳ್ಯ ಕೊಡಿಯಾಲ ಬೈಲ್‌ ರಸ್ತೆಯ ಮಾರ್ಗ ಮಧ್ಯೆ ಮೊಬೈಲೊಂದು ಬಿದ್ದು ಸಿಕ್ಕಿದೆ. ಅದನ್ನು ಅವರು ವಾರಸುದಾರರಾದ ಬಶೀರ್ ಜಟ್ಟಿಪಳ್ಳ ಅವರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದರು.