ಚಂದ್ರಾ ಕೋಲ್ಚಾರ್ ರಿಗೆ ಗೌರವ ಸನ್ಮಾನ
ಸುಳ್ಯ ಗೌಡರ ಯುವ ಸೇವಾ ಸಂಘ ಇದರ ತಾಲೂಕು ಮಹಿಳಾ ಘಟಕದ ವತಿಯಿಂದ ಮಕ್ಕಳ ಮುಕ್ತ ಚೆಸ್ ಸ್ಪರ್ಧೆ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯುತ್ತಿದೆ.

ಬೆಳಗ್ಗೆ ಚೆಸ್ ಸ್ಪರ್ಧೆಯನ್ನು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಯವರು ಉದ್ಘಾಟಿಸಿ, ಶುಭಹಾರೈಸಿದರು.















ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಹರಿಶ್ಚಂದ್ರ ಪಾತಿಕಲ್ಲು ರವರ ಅಧ್ಯಕ್ಷತೆಯಲ್ಲಿ ಸ್ಪರ್ಧೆ ಆಯೋಜನೆಗೊಂಡಿದ್ದು, ಸಮಾರಂಭದಲ್ಲಿ ಕರ್ನಾಟಕ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ಬೆಂಗಳೂರು ಇದರ ನಿರ್ದೇಶಕರಾಗಿರುವ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ರನ್ನು ಸನ್ಮಾನಿಸಲಾಯಿತು.

ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಎಂ.ಜಿ.ಎಂ.ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಗೌಡರ ಯುವ ಸೇವಾ ಸಂಘದ ನಿಕಟ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ, ತಾಲೂಕು ತರುಣ ಘಟಕದ ಅಧ್ಯಕ್ಷ ಪ್ರೀತಂ ಕೇರ್ಪಳ, ಮಹಿಳಾ ಘಟಕದ ಪೂರ್ವಾಧ್ಯಕ್ಷರುಗಳಾದ ಶ್ರೀಮತಿ ರೇಣುಕಾ ಸದಾನಂದ ಜಾಕೆ, ಶ್ರೀಮತಿ ಪುಷ್ಪಾ ರಾಧಾಕೃಷ್ಣ, ಶಾಂತ ರಾಮ ಭಟ್ ಚೆಸ್ ಅಸೋಶಿಯನ್ ತಾಲೂಕು ಅಧ್ಯಕ್ಷರು, ಮಹಿಳಾ ಘಟಕ ಕಾರ್ಯದರ್ಶಿ ಸವಿತಾ ಸಂದೇಶ್ ಮೊದಲಾದವರು ವೇದಿಕೆಯಲ್ಲಿ ಇದ್ದರು.

ಮೀನಾಕ್ಷಿ ರಾಮಕಜೆ ಪ್ರಾರ್ಥಿಸಿದರು. ಶ್ರೀಮತಿ ವಿನುತಾ ಪಾತಿಕಲ್ಲು ಸ್ವಾಗತಿಸಿದರು. ಶ್ರೀಮತಿ ತಾರಾ ಮಾಧವ ವಂದಿಸಿದರು. ಕು.ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು










