ಬೆಳ್ಳಾರೆ ಪೊಲೀಸ್ ಠಾಣೆಗೆ ಐಜಿಪಿ ಅಮಿತ್ ಸಿಂಗ್ ಭೇಟಿ

0

ಇಲಾಖೆಯ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಸಲಹೆ

ಬೆಳ್ಳಾರೆ ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಎ.22 ರಂದು ಭೇಟಿ ನೀಡಿದರು. ಕಚೇರಿಗೆ ಆಗಮಿಸಿದ ಅವರು ಪೊಲೀಸ್ ಇಲಾಖೆಯ ಕೆಲಸಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಸಲಹೆ,ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಎಸ್.ಪಿ.ಯತೀಶ್ ಎನ್,ಪ್ರೊಬೆಷನರಿ ಐಪಿಎಸ್ ಮನಿಷಾ ಮನೋಹಿ, ಪುತ್ತೂರು ಡಿವೈಎಸ್.ಪಿ. ಅರುಣ್ ನಾಗೇ ಗೌಡ, ಸುಳ್ಯ ಸರ್ಕಲ್ ಇನ್ಸ್ ಪೆಕ್ಟರ್ ತಿಮ್ಮಪ್ಪ ನಾಯ್ಕ್, ಬೆಳ್ಳಾರೆ ಠಾಣಾ ಎಸ್.ಐ.ಈರಯ್ಯ ದೂಂತೂರು, ಸುಬ್ರಹ್ಮಣ್ಯ ಠಾಣಾ ಎಸ್.ಐ.ಕಾರ್ತಿಕ್ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.