Home Uncategorized ಜಮ್ಮು ಕಾಶ್ಮೀರದ ಪಹಲ್ ಗಾಂವದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯರಿಗೆ ಯೂತ್ ಕಾಂಗ್ರೆಸ್ ನಿಂದ...

ಜಮ್ಮು ಕಾಶ್ಮೀರದ ಪಹಲ್ ಗಾಂವದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಭಾರತೀಯರಿಗೆ ಯೂತ್ ಕಾಂಗ್ರೆಸ್ ನಿಂದ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ

0

ಪಹಲ್ ಗಾಂವ್ ಘಟನೆ ಖಂಡನೀಯ – ಕೇಂದ್ರ ಸರಕಾರದ ಭದ್ರತಾ ವೈಫಲ್ಯವೇ ಕಾರಣ : ಕೇಂದ್ರ ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ನಾಯಕರ ಆಗ್ರಹ

ಜಮ್ಮು ಕಾಶ್ಮೀರದ ಪಹಲ್ ಗಾಂವದಲ್ಲಿ ಭಯೋತ್ಪಾದಕರ ಧಾಳಿಯಿಂದ ಹುತಾತ್ಮರಾದ ಭಾರತೀಯರಿಗೆ ಸುಳ್ಯ ಯೂತ್ ಕಾಂಗ್ರೆಸ್ ನಿಂದ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ ಕಾರ್ಯಕ್ರಮ ಎ.22ರಂದು ಸಂಜೆ ನಡೆಯಿತು.

ಸುಳ್ಯ ಖಾಸಗಿ‌ ಬಸ್ ನಿಲ್ದಾಣದಲ್ಲಿ ಸೇರಿದ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಬ್ಲಾಕ್ ಕಾಂಗ್ರೆಸ್ ನವರು ಮೊಂಬತ್ತಿ ಉರಿಸಿ, ಘಟನೆಯಿಂದ ಮಡಿದ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೌನ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಮಾತನಾಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಯವರು “ಪಹಲ್ ಗಾಂವ ನಲ್ಲಿ ನಡೆದ ಕೃತ್ಯ ಅತ್ಯಂತ ಖಂಡನೀಯ. ಈ ಘಟನೆಗೆ ಕೇಂದ್ರ ಸರಕಾರದ ಭದ್ರತಾ ವೈಫಲ್ಯವೇ ಕಾರಣ ಎಂದು ಹೇಳಿದರು.

ಬಳಿಕ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ನಾಯಕ ಎನ್.ಜಯಪ್ರಕಾಶ್ ರೈಯವರು ” ಇದು ರಾಜಕೀಯ, ಮತೀಯವಾಗಿ ಮಾತನಾಡುವ ಸಂದರ್ಭ ಅಲ್ಲವೇ ಅಲ್ಲ. ಆಗಬಾರದ ಘಟನೆ ನಡೆದಿದೆ. ಇದನ್ನು ದೇಶವೇ ಸೇರಿ ಖಂಡಿಸಬೇಕು. ಕಾಶ್ಮೀರದ ಜನ ಅವರ ಹೊಟ್ಟೆಗೆ ಹೊಡೆದಂತಾಗಿದೆ. ಸುಂದರ ಪ್ರದೇಶ ನೋಡಲು ಹೋದಾಗ ಅಲ್ಲಿಯ ಜನ ನಮ್ಮನ್ನು ರಕ್ಷಿಸಬೇಕು. ಆ ಜವಾಬ್ದಾರಿ ಅವರು ನೋಡಿಕೊಳ್ಳಬೇಕು. ಅಖಂಡಭಾರತವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಈ ದೇಶದ ಜನರಿಗೆ ಇದೆ ಎಂದು ಹೇಳಿದರು.

ಕಾಶ್ಮೀರದಂತ ಪ್ರದೇಶದಲ್ಲಿ ಸೆಕ್ಯೂರಿಟಿಯೂ ಉತ್ತಮ ರೀತಿಯಲ್ಲಿ ಇರಬೇಕಾಗಿದೆ. ಐದಾರು ಜನ ಉಗ್ರಗಾಮಿಗಳು ಬಂದು ಗುಂಡು ಹೊಡೆಯುತ್ತಾರೆಂದರೆ ಅಲ್ಲಿಯ ಭದ್ರತೆಯನ್ನು ಏನೆಂದು ಹೇಳಬೇಕು. ಅಲ್ಲಿ ಆರ್ಮಿ, ಪೋಲೀಸ್ ಪಡೆ ಇರುತ್ತಿದ್ದರೆ ಉಗ್ರರನ್ನೆ ಹಿಮ್ಮೆಟ್ಟಿಸಬಹುದಿತ್ತು. 4 -5 ಸಾವಿರ ಸೇರುವಲ್ಲಿ ಯಾಕೆ ಭದ್ರತೆ ನೀಡಿಲ್ಲ ಎಂದು ನಾವು ಕೇಂದ್ರ ಸರಕಾರವನ್ನು ಕೇಳಬೇಕಾಗಿದೆ. ಅಲ್ಲಿ ಭದ್ರತೆ ಇಲ್ಲ ಎಂದು ತಿಳಿದೇ ಉಗ್ರಗಾಮಿಗಳು ಬಂದಂತಿದೆ. ಜಮ್ಮು ಕಾಶ್ಮೀರದ ಪೋಲೀಸ್ ಇರುವುದೆ ಕೇಂದ್ರ ಸರಕಾರದ ಕೈಯಲ್ಲಿ. ಹೀಗಿರುವಾಗ ಕೇಂದ್ರ ಯಾಕೆ ಭದ್ರತೆ ನೀಡಿಲ್ಲ. ಅಲ್ಲಿ ಪೋಲೀಸ್ ಟೀಮ್ ಇರುತ್ತಿದ್ದರೆ ಈ ಘಟನೆಯೇ ಆಗುತ್ತಿರಲಿಲ್ಲ ಎಂದ ಅವರು ದೇಶ ಮೇಲೆ ಅಟಾಕ್ ಆದಾಗ ಎಲ್ಲರೂ ಖಂಡಿಸಬೇಕು. ಆಕ್ರಮಿತ ಕಾಶ್ಮೀರ ವಶ ಪಡಿಸಲು ಇದು ಸಕಾಲ. ಈಗ ಕೇಂದ್ರ ಇದನ್ನು ಮಾಡಬೇಕು ಅಖಂಡ ಭಾರತ ನಿರ್ಮಾಣ ಆಗಲಿ ಎಂದು ಹೇಳಿದರು.

ಕೆಪಿಸಿಸಿ ನಾಯಕರಾದ ಟಿ.ಎಂ.ಶಹೀದ್ ಮಾತನಾಡಿ ಇಂದು ನಡೆದ ಭಯೋತ್ಪಾದಕ ದಾಳಿಗೆ ಕೇಂದ್ರ ಸರಕಾರ ಕಾರಣ. ಇಂಟೆಲಿಜೆನ್ಸ್‌ ವಿಫಲವಾದುದರಿಂದ ಈ ಘಟನೆ ನಡೆದಿದೆ. ಭದ್ರತೆ ವೈಫಲ್ಯ ಯಾಕಾಯಿತು ಎನ್ನುವುದು ನಮ್ಮ ಪ್ರಶ್ನೆ. ಇದರ ಸೂಕ್ತ ತನಿಖೆ ನಡೆದು ಸತ್ಯಾಸತ್ಯತೆ ಜನರ ಮುಂದೆ ಇಡುವ‌ ಕೆಲಸ ಕೇಂದ್ರ ಸರಕಾರ ಮಾಡಬೇಕು ಎಂದು ಹೇಳಿದರು.

ಎ.ಎ.ಪಿ ಮುಖಂಡರಾದ ಅಶೋಕ್ ಎಡಮಲೆ ಮಾತನಾಡಿ “ಕಾಶ್ಮೀರದಲ್ಲಿ ನಡೆದ ಘಟನೆ ಖಂಡನೀಯ. ಕೇಂದ್ರ ಸರಕಾರ ತಮ್ಮ ಹೊಣೆಗಾರಿಕೆಯನ್ನು ಮರೆತು ಮಾತನಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ. ನಾವು ಸಂವಿಧಾನ ದ ವಿಚಾರದಲ್ಲಿಯೂ ಜಾಗೃತರಾಗಬೇಕಿದೆ. ಸೌಹಾರ್ದ ಸಂವಿಧಾನ ದ ಆಶಯದಂತೆ ನಾವೆಲ್ಲರೂ ನಡೆಯಬೇಕು ಈ ಘಟನೆಯನ್ನು ಸಡಿಲವಾಗಿ ಪರಿಗಣಿಸುವುದು ಬೇಡ” ಎಂದು‌ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಮಾತನಾಡಿ “ಕೇಂದ್ರ ಸರಕಾರದ ಭದ್ರತಾ ವೈಫಲ್ಯವೇ ಈ ಘಟನೆಗೆ ಕಾರಣ. ಪ್ರೇಕ್ಷಣೀಯ ಸ್ಥಳದಲ್ಲಿ ಯಾವ ರೀತಿ ಭದ್ರತೆ ಬೇಕೆಂಬ ಜ್ಞಾನ ಕೇಂದ್ರ ಸರಕಾರಕ್ಕೆ ಬೇಕು. ಇಂದು ನಡೆದ ಕೃತ್ಯ ಮುಂದೆ ಯಾವತ್ತೂ ಆಗಬಾರದು. ಕೇಂದ್ರ ದ ಗೃಹಸಚಿವರು ನೈತಿಕ ಹೊಣೆ‌ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಇಂಟಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ನಂದರಾಜ ಸಂಕೇಶ, ಜುಬೈರ್ ಅರಂತೋಡು, ಎಸ್‌ಕೆ.ಹನೀಫ ಸಂಪಾಜೆ, ಜಿ.ಕೆ.ಹಮೀದ್ ಸಂಪಾಜೆ, ಬಶೀರ್ ನಾವೂರು, ರಾಧಾಕೃಷ್ಣ ಪರಿವಾರಕಾನ, ಅಬ್ಬಾಸ್ ಅಎ್ಕ, ಭೋಜಪ್ಪ ನಾಯ್ಕ್ ಅಡ್ಕಾರು, ಧನಂಜಯ ಕಲ್ಮಡ್ಕ, ಭವಾನಿಶಂಕರ್ ಕಲ್ಮಡ್ಕ, ಚಂದ್ರಶೇಖರ ಕೋಲ್ಚಾರ್, ಹೈದರ್ ಹಳೆಗೇಟು, ಜನಾರ್ದನ ಪ್ರಭು, ಇಬ್ರಾಹಿಂ ಜಯನಗರ, ಶಿವರಾಮ ಅಮೈ, ಸುರೇಶ್ ಎಂ.ಹೆಚ್., ರಿಯಾಜ್ ಕಟ್ಟೆಕಾರ್, ಧರ್ಮಪಾಲ ಕೊಯಿಂಗಾಜೆ, ಆಶಿಕ್ ಅರಂತೋಡು, ಭಾಸ್ಕರ ಪೂಜಾರಿ ದುಗಲಡ್ಕ, ಕೇಶವ ಮೊರಂಗಲ್ಲು, ಕೆ.ಗೋಕುಲ್ ದಾಸ್, ದಿನೇಶ್ ಅಂಬೆಕಲ್ಲು, ನಝೀರ್ ಶಾಂತಿನಗರ, ಸುರೇಶ್ ಕಾಮತ್ ಮೊದಲಾದವರಿದ್ದರು.

ಶಶಿಧರ ಎಂ.ಜೆ. ಕಾರ್ಯಕ್ರಮ ನಿರ್ವಹಿಸಿದರು.

NO COMMENTS

error: Content is protected !!
Breaking